ಹರ್ಯಾಣ ಪೊಲೀಸರ ಕ್ರೌರ್ಯಕ್ಕೆ ಮುಸ್ಲಿಮ್ ಯುವಕ ಬಲಿ

Prasthutha|

►ಫರೀದಾಬಾದ್ ನಲ್ಲಿ ಲಾಕಪ್ ಡೆತ್

- Advertisement -

ಹರ್ಯಾಣ ಪೊಲೀಸರ ಕೌರ್ಯಕ್ಕೆ ಮುಸ್ಲಿಮ್ ಯುವಕನೊಬ್ಬ ಬಲಿಯಾಗಿದ್ದಾನೆ. 21 ವರ್ಷ ಪ್ರಾಯದ ಜುನೈದ್ ಮೃತಪಟ್ಟ ಯುವಕ. ಫರೀದಾಬಾದ್ ಪೊಲೀಸರು ಯುವಕನನ್ನು ಮನೆಯಿಂದ ಕರೆದೊಯ್ದು ಠಾಣೆಯಲ್ಲಿ ಕ್ರೂರವಾಗಿ ಹಿಂಸೆ ನೀಡಿದ್ದಾರೆ. ತೀವ್ರ ಅಸ್ವಸ್ಥನಾದ ಜುನೈದ್ ಬಳಿಕ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆಯನ್ನು ಖಂಡಿಸಿ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಆಸಿಫ್ ಖಾನ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

- Advertisement -
https://twitter.com/imMAK02/status/1403667075483144199

ಜುನೈದ್ ಗೆ ಕಸ್ಟಡಿಯಲ್ಲಿ ಕ್ರೂರವಾಗಿ ಹಿಂಸಿಸಲಾಗಿದೆ. ಬಳಿಕ 70,000 ರೂ.ಲಂಚ ಪಡೆದು ಆತನನ್ನು ಬಿಟ್ಟು ಕಳುಹಿಸಲಾಗಿತ್ತು. ಆದರೆ ತೀವ್ರ ಗಾಯಗೊಂಡ ಜುನೈದ್ ಬಳಿಕ ಮೃತಪಟ್ಟಿದ್ದಾನೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

https://twitter.com/imMAK02/status/1403675559616409602
Join Whatsapp
Exit mobile version