Home ಟಾಪ್ ಸುದ್ದಿಗಳು “ಹಮ್ ಹಿಂದೂ ಹೈ, ತು ಮುಲ್ಲಾ ಹೈ” ಎಂದು ಹೇಳಿ ಮುಸ್ಲಿಮ್ ಯುವಕನ ಗುಂಪು ಹತ್ಯೆ

“ಹಮ್ ಹಿಂದೂ ಹೈ, ತು ಮುಲ್ಲಾ ಹೈ” ಎಂದು ಹೇಳಿ ಮುಸ್ಲಿಮ್ ಯುವಕನ ಗುಂಪು ಹತ್ಯೆ

ಚಂಡೀಗಡ: ಹರಿಯಾಣದಲ್ಲಿ 22 ವರ್ಷದ ಮುಸ್ಲಿಮ್ ಯುವಕನನ್ನು ಸಂಘಪರಿವಾರದ ಕಾರ್ಯಕರ್ತರು “ಹಮ್ ಹಿಂದೂ ಹೈ, ತು ಮುಲ್ಲಾ ಹೈ” ಎಂದು ಹೇಳುತ್ತಾ ಥಳಿಸಿ ಕ್ರೂರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆ ನಡೆದಿದ್ದು, ಈ ಕುರಿತ ವೀಡಿಯೋ ವೈರಲ್ ಆಗಿದೆ. ಮೃತನನ್ನು ರಾಹುಲ್ ಖಾನ್ ಎಂದು ಗುರುತಿಸಲಾಗಿದೆ.

ಖಾನ್ ಅವರನ್ನು ಡಿಸೆಂಬರ್ 13 ರಂದು ಕಲುವಾ, ಆಕಾಶ್ ಮತ್ತು ಇತರರು ಕರೆದೊಯ್ದು ಈ ಕೃತ್ಯವೆಸಗಿದ್ದಾರೆ.   ಡಿಸೆಂಬರ್ 13 ರಂದು, ಹರಿಯಾಣದ ಪಲ್ವಾಲ್‌ ನ ರಸೂಲ್‌ಪುರ ಗ್ರಾಮದ ನಿವಾಸಿಯಾದ 22 ವರ್ಷದ ರಾಹುಲ್ ಖಾನ್ ನನ್ನು ಆತನ ಸ್ನೇಹಿತರಾದ ಕಲುವಾ, ಆಕಾಶ್ ಮತ್ತು ಇತರರು ಮನೆಯಿಂದ ಕರೆದುಕೊಂಡು ಹೋಗಿ ಈ ಕೃತ್ಯವೆಸಗಿದ್ದಾರೆ. 

ಎಷ್ಟೇ ಹೊತ್ತಾದರೂ ಖಾನ್ ಮನೆಗೆ ಹಿಂದಿರುಗದಿದ್ದಾಗ ಮನೆಯವರು ಆತಂಕಗೊಂಡು ಎಲ್ಲಾ ಕಡೆ ವಿಚಾರಿಸಿದ್ದಾರೆ.ಕಲುವಾ ಮತ್ತು ಆಕಾಶ್ ಸೋಮವಾರ ರಸೂಲ್‌ ಪುರದಲ್ಲಿರುವ ಖಾನ್‌ ನ ಮನೆಗೆ ಬಂದು ಆತನನ್ನು ಕರೆದೊಯ್ದರು. ಮತ್ತೆ ಆತ ಮನೆಗೆ ಹಿಂದಿರುಗಲೇ ಇಲ್ಲ ಎಂದು ರಾಹುಲ್ ಖಾನ್ ಅವರ ಸೋದರ ಅಕ್ರಂ ಹೇಳುತ್ತಾರೆ.

https://twitter.com/i/status/1472510926410555397

ಡಿಸೆಂಬರ್ 14ರಂದು ಅಕ್ರಂಗೆ ಕರೆ ಮಾಡಿದ ಕಲುವಾ, ನಿನ್ನ ಸಹೋದರ ರಾಹುಲ್ ಖಾನ್ ಗೆ ಅಪಘಾತವಾಗಿದೆ ಎಂದು ತಿಳಿಸಿದ್ದಾನೆ.  “ಫೋನ್ ಕರೆ ಮಾಡಿದ ನಂತರ ನಾನು ಆತಂಕಗೊಂಡು ಕಲುವಾನ ಮನೆಗೆ ಹೋದೆ. ಆದರೆ ಅಲ್ಲಿಗೆ ಹೋದಾಗ ನನ್ನ ಆತಂಕ ನಿಜವಾಯಿತು. ನನ್ನನ್ನು ಆತನ ನಿಂದಿಸತೊಡಗಿದರು, ‘ನೀವು ಬಂದಿಯಾ, ನಿನ್ನನ್ನು ಕೂಡ ಕೊಲ್ಲುತ್ತೇನೆ” ಎಂದು ಬೆದರಿಸಿದ್ದಾನೆ,  ಇದರಿಂದ ನನಗೆ ಭಯವಾಯಿತು ಮತ್ತು ನಾನು ಓಡಿಹೋದೆ ಎಂದು ಅಕ್ರಂ ಸುದ್ದಿಗಾರರಿಗೆ ತಿಳಿಸಿದರು.

ತಕ್ಷಣ ಖಾನ್ ಅವರ ಕುಟುಂಬ ಸದಸ್ಯರು ಖಾನ್ ಇರುವಲ್ಲಿಗೆ ಹೋಗಿ ನೋಡಿದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನಿಗೆ ತೀವ್ರವಾಗಿ ಥಳಿಸಿರುವುದು ಗೊತ್ತಾಯಿತು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ದಾಖಲಾದ 6 ಗಂಟೆಗಳಲ್ಲೇ ರಾಹುಲ್ ಖಾನ್ ಕೊನೆಯುಸಿರೆಳೆದ ಎಂದು ಅಕ್ರಂ ತಿಳಿಸಿದ್ದಾರೆ.

ತಕ್ಷಣ ಖಾನ್ ಕುಟುಂಬವು ಹತ್ತಿರದ ಚಂದಾತ್‌ ಪೊಲೀಸ್ ಠಾಣೆಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿತು, ಖಾನ್ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೊದಲು ಭಾವಿಸಲಾಗಿತ್ತು. ಆದರೆ ಡಿಸೆಂಬರ್ 15 ರ ಬೆಳಿಗ್ಗೆ,   ವೈರಲ್ ಆದ ವೀಡಿಯೊದಿಂದಾಗಿ ಅವರನ್ನು ಥಳಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ ಖಾನ್ ರಕ್ತದ ಮಡುವಿನಲ್ಲಿ ಬಿದ್ದಿರುವುದು, ಆತನಿಗೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.

“ರಾಹುಲ್ ಖಾನ್ ದೇಹದ ಮೇಲೆ ಗಂಭೀರ ಹಲ್ಲೆಯ ಗಾಯಗಳಿದ್ದವು.  ಕೊಡಲಿ ಮತ್ತು ರಾಡ್‌ ಗಳಿಂದ ಹೊಡೆದಿದ್ದಾನೆಂದು ತೋರುತ್ತದೆ” ಎಂದು ಅಕ್ರಮ್ ಹೇಳಿದ್ದಾರೆ.  ಸುನಿಲ್ ಚಾಹಲ್ ಚಾಹಲ್ ಎಂಬಾತ ಈ ವೀಡಿಯೋವನ್ನು  ಫೇಸ್‌ಬುಕ್‌ ನಲ್ಲಿ ಅಪ್‌ಲೋಡ್ ಮಾಡಿದ್ದ. ಬಳಿಕ ಆತ ಅದನ್ನು ಡಿಲಿಟ್ ಮಾಡಿದ್ದಾನೆ ಎಂದು ಅಕ್ರಮ್ ಹೇಳುತ್ತಾರೆ. ಚಂದಾತ್ ಪೊಲೀಸ್ ಠಾಣೆಯಲ್ಲಿ ಐಪಿಸಿ 209 ಮತ್ತು 304 ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಮತ್ತು ಇದುವರೆಗೆ ಒಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version