ಉತ್ತರಪ್ರದೇಶದ ಉನ್ನಾವೋದಲ್ಲಿ ಮುಸ್ಲಿಂ ಯುವಕನ ಥಳಿಸಿ ಹತ್ಯೆ

Prasthutha|

ಉನ್ನಾವೋ : ಉತ್ತರ ಪ್ರದೇಶದ ಉನ್ನಾವೋದಲ್ಲಿ ಅನೀಸ್ ಎಂಬ ಮುಸ್ಲಿಂ ಯುವಕನನ್ನು ಥಳಿಸಿ ಹತ್ಯೆಗೈದ ಘಟನೆ ನಡೆದಿದೆ. ಉನ್ನಾವೊದ ಬೆಹ್ತಾ ಮುಜಾವರ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಮುಸ್ಲಿಂ ಯುವಕನನ್ನು ಕಳ್ಳನೆಂದು ಆರೋಪಿಸಿ ಸ್ಥಳೀಯರು ಥಳಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನೀಸ್‌ನನ್ನು ಬಂಗರ್‌ಮಾವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರೂ ಯುವಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಅನೀಸ್ ತಂದೆ ರ‌ಈಸ್ ಒತ್ತಾಯಿಸಿದ್ದಾರೆ. ತನ್ನ ಮಗ ಕಳ್ಳನಲ್ಲ, ಬೇರೆ ಉದ್ದೇಶದಿಂದ ಬೆಹ್ತಾ ಮುಜಾವರ್ ಪ್ರದೇಶಕ್ಕೆ ಹೋದಾಗ ಗುಂಪೊಂದು ಥಳಿಸಿ ಹತ್ಯೆಗೈದಿದೆ ಎಂದು ರ‌ಈಸ್  ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಂಗರ್‌ಮಾವು ವೃತ್ತ ನಿರೀಕ್ಷಕ ಅಂಜನಿ ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಾರಗಳ ಹಿಂದೆ ಜಾರ್ಖಂಡ್‌ನ ಅಂಗರಾದಲ್ಲಿ ಬೈಕ್‌ ಕದಿಯುತ್ತಿದ್ದನೆಂದು ಆರೋಪಿಸಿ ಮುಬಾರಕ್ ಖಾನ್ (27) ಎಂಬಾತನನ್ನು ಗುಂಪೊಂದು ಥಳಿಸಿ ಹತ್ಯೆಗೈದಿತ್ತು. ಕಳೆದ ಫೆಬ್ರವರಿಯಲ್ಲೂ ಉತ್ತರ ಪ್ರದೇಶದ ಬರೇಲ್ವಿಯಲ್ಲಿ ರಿಹಾನ್ ಎಂಬ ಯುವಕನನ್ನು ಗುಂಪೊಂದು ಥಳಿಸಿ ಕೊಂದು ಹಾಕಿತ್ತು.

Join Whatsapp