ಮುಸ್ಲಿಮ್ ಮತಗಳು ನಗಣ್ಯ, ಬಿಜೆಪಿ ಮುಸ್ಲಿಮರ ಬಳಿ ಮತ ಕೇಳುವುದಿಲ್ಲ: ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಶರ್ಮಾ

Prasthutha|

ಗುವಾಹಟಿ: ಅಸ್ಸಾಂನಲ್ಲಿ ಬಂಗಾಳ ಮೂಲದ ಮುಸ್ಲಿಮ್ ಸಮುದಾಯದ ಮತಗಳು ಬಿಜೆಪಿಗೆ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹಿಮಂತ್ ಬಿಶ್ವ ಶರ್ಮಾ ತಿಳಿಸಿದ್ದಾರೆ. ಅವರು “ ಇಂಡಿಯಾ ಟುಡೇ ಕಾನ್ಕ್ಲೇವ್ 2021” ಎಂಬ ಸಂದರ್ಶನದಲ್ಲಿ ಮಾತನಾಡುತ್ತಾ ಈ ಮೇಲಿನ ರೀತಿ ಹೇಳಿದರು.

- Advertisement -

ಬಿಜೆಪಿ ಪಕ್ಷಕ್ಕೆ ಮುಸ್ಲಿಮರ ಮತಗಳು ಬೇಡ, ನಾವು ಅವರ ಬಳಿ ಮತವನ್ನು ಯಾಚಿಸುವುದಿಲ್ಲ. ಅಸ್ಸಾಂ ಅಸ್ಮಿತೆ, ಸಂಸ್ಕೃತಿ ಮತ್ತು ಭೂಮಿಯನ್ನು ಕಳೆದುಕೊಂಡಿರುವುದಕ್ಕೆ ಮೂಲ ಕಾರಣ ವಲಸೆ ಮುಸ್ಲಿಮರು ಎಂದು ಹಿಮಂತ್ ಶರ್ಮಾ ಆರೋಪಿಸಿದರು.

ಅಸ್ಸಾಂನಲ್ಲಿ ವಲಸೆ ಮುಸ್ಲಿಮರ ಜನಸಂಖ್ಯೆ ವ್ಯಾಪಕವಾಗಿರುವುದರಿಂದ ಅತಿಕ್ರಮಣ ನಡೆಯುತ್ತಿದೆ. ಈ ಪ್ರಕ್ರಿಯೆ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿದ್ದು, ಇತಿಹಾಸದ ಹೊರೆಯನ್ನು ಅಸ್ಸಾಂ ಜನತೆಯ ಪರವಾಗಿ ಹೊತ್ತುಕೊಂಡಿದ್ದೇನೆ ಎಂದು ಅವರು ತಿಳಿಸಿದರು.

- Advertisement -

ಕಳೆದ ತಿಂಗಳ ಮಹತ್ವದ ಬೆಳವಣಿಗೆಯೊಂದರಲ್ಲಿ ಧೋಲ್ಪುರ ಗ್ರಾಮದಲ್ಲಿ ಮುಸ್ಲಿಮರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ವಿರುದ್ಧ ನಡೆದ ಪ್ರತಿಭಟನೆ ವೇಳೆಯಲ್ಲಿ ಉಂಟಾದ ಘರ್ಷಣೆಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಮಾತ್ರವಲ್ಲ ಒಬ್ಬ ಪೊಲೀಸ್ ಸೇರಿದಂತೆ ಕನಿಷ್ಠ 12 ಮಂದಿ ಗಾಯಗೊಂಡಿದ್ದರು.

Join Whatsapp