Home ಕರಾವಳಿ ನಾಳೆ ಕರ್ನಾಟಕ ಬಂದ್ ಗೆ ಕರೆ: ವಿವಿಧ ಸಂಘಟನೆಗಳ ಬೆಂಬಲ

ನಾಳೆ ಕರ್ನಾಟಕ ಬಂದ್ ಗೆ ಕರೆ: ವಿವಿಧ ಸಂಘಟನೆಗಳ ಬೆಂಬಲ

ಮಂಗಳೂರು: ಹಿಜಾಬ್ ನಿರಾಕರಣೆಯ ವಿರುದ್ಧ ನಾಳೆ ಕರೆನೀಡಲಾಗಿರುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಬಂದ್ ಯಶಸ್ವಿಗೊಳಿಸುವಂತೆ ಕರೆ ನೀಡಿದೆ.

ಬಂದ್ ಬೆಂಬಲಿಸುವಂತೆ ಅಡ್ಡೂರು ಜಮಾಅತ್ ಕಮಿಟಿ

ಹಿಜಾಬ್ ಅನ್ಯಾಯದ ತೀರ್ಪು ವಿರೋಧಿಸಿ ನಾಳೆ ರಾಜ್ಯಾದ್ಯಂತ ಕರೆ ನೀಡಿರುವ ಶಾಂತಿಯುತ ಬಂದ್ ಗೆ ಬೆಂಬಲವಾಗಿ ಅಡ್ಡೂರು ಜಮಾಅತಿನ ಮತ್ತು ಪರಿಸರದ ಎಲ್ಲಾ ವ್ಯಾಪಾರಸ್ಥರು, ಶಿಕ್ಷಣ ಸಂಸ್ಥೆಗಳು ಮತ್ತು ಇತರರು ನಾಳೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲು ಅಡ್ಡೂರು ಜಮಾಅತ್ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಬಂದ್ ಗೆ ಉಜಿರೆ ಜಮಾಹತ್ ಸಂಪೂರ್ಣ ಬೆಂಬಲ

ಕರ್ನಾಟಕ ಉಚ್ಛ ನ್ಯಾಯಾಲಯ ಹಿಜಾಬ್ ಕುರಿತ ತೀರ್ಪುವಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ ಮತ್ತು ಹಿಜಾಬ್ ಇಸ್ಲಾಮಿನ ಅವಿಭಾಜ ಅಂಗವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆಯನ್ನು ವಿಮರ್ಶಿಸಿ ಕರ್ನಾಟಕದಾದ್ಯಂತ ಮಾರ್ಚ್ 17 ರಂದು ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ಕರೆ ನೀಡಿರುವ ಶಾಂತಿಯುತ ಬಂದ್ ಗೆ ಬೆಂಬಲವಾಗಿ, MJM ಹಳೇಪೇಟೆ ಉಜಿರೆ ಆಡಳಿತದ ಜಮಾಅತಿನ ಮತ್ತು ಪರಿಸರದ ಎಲ್ಲಾ ವ್ಯಾಪಾರಸ್ಥರು, ಮತ್ತು ಇತರರು ನಾಳೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲು ಉಜಿರೆ ಜಮಾಹತ್ ಸಮಿತಿ ಮನವಿ ಮಾಡಿದೆ.

ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ಮುಲ್ಕಿ ತಾಲೂಕು ಬೆಂಬಲ

ಕರ್ನಾಟಕ ರಾಜ್ಯ ಅಮೀರ್-ಎ-ಶರೀಯತ್ ಮುಖ್ಯಸ್ಥರಾದ ಮೌಲಾನ ಸಗೀರ್ ಅಹಮ್ಮದ್ ರವರು ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿಗೆ ವಿಷಾದ ವ್ಯಕ್ತಪಡಿಸಿ ನಾಳೆ ಮಾರ್ಚ್ 17, ಗುರುವಾರದಂದು ಕರ್ನಾಟಕ ಬಂದ್’ಗೆ ಕರೆ ನೀಡಿದ್ದು, ಮುಲ್ಕಿ ತಾಲೂಕು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ.

Join Whatsapp
Exit mobile version