ಉತ್ತರ ಪ್ರದೇಶ | ಮುಸ್ಲಿಮ್ ವೃದ್ಧನಿಗೆ ಪಿಸ್ತೂಲ್ ತೋರಿಸಿ ಗಡ್ಡ ಕತ್ತರಿಸಿದ ಹಿಂದುತ್ವ ಪಡೆ

Prasthutha: June 14, 2021

ಮುಸ್ಲಿಮ್ ವೃದ್ಧರೊಬ್ಬರಿಗೆ ಐವರು ಗೂಂಡಾಗಳು ತೀವ್ರವಾಗಿ ಥಳಿಸಿ, ಪಿಸ್ತೂಲ್ ತೋರಿಸಿ ಬಲವಂತವಾಗಿ ಅವರ ಗಡ್ಡವನ್ನು ಕತ್ತರಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

ಸೂಫಿ ಅಬ್ದುಲ್ ಸಮದ್ ಸೈಫಿ ಹಲ್ಲೆಗೊಳಗಾದ ಮುಸ್ಲಿಮ್ ವೃದ್ಧ. ಅವರನ್ನು ನಾಲ್ಕೈದು ಮಂದಿಯಿದ್ದ ಗೂಂಡಾ ಪಡೆ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು, ದೊಣ್ಣೆಯಿಂದ ತೀವ್ರವಾಗಿ ಥಳಿಸಿದೆ, ಈ ವೇಳೆ ವೃದ್ಧರು ನೋವು ತಾಳಲಾರದೆ …ಅಲ್ಲಾಹ್… ಅಲ್ಲಾಹ್ … ಎಂದು ಉಚ್ಛರಿಸುತ್ತಿದ್ದರು. ಆಗ ದುಷ್ಕರ್ಮಿಗಳು ಅಲ್ಲಾಹನ ಹೆಸರು ಹೇಳಬಾರದು, ಜೈಶ್ರೀರಾಮ್ ಹೇಳು ಎಂದು ಪಿಸ್ತೂಲ್ ತಲೆಗೆ ಇಟ್ಟು, ಕೊಲೆ ಬೆದರಿಕೆ ಹಾಕಿ, ಗಡ್ಡವನ್ನು ಬಲವಂತವಾಗಿ ಕತ್ತರಿಸಿದ್ದಾರೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ದುಷ್ಕರ್ಮಿಗಳು ಚಿತ್ರೀಕರಿಸಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಸಂತ್ರಸ್ತ ವೃದ್ಧ ನಡೆದ ಘಟನೆಯನ್ನು ನೋವಿನಿಂದ ಹೇಳುತ್ತಿರುವುದು ಕಾಣುತ್ತಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ