ಬಿಜೆಪಿ ಮುಖಂಡನ ಸಹೋದರನ ಮದುವೆಯಲ್ಲಿ ಗುಂಡು ಹಾರಾಟ: ವ್ಯಕ್ತಿ ಸಾವು

Prasthutha|

ಸಾದಿಕ್ ಖುರೇಶಿ ಮೃತಪಟ್ಟ ವ್ಯಕ್ತಿ

- Advertisement -

ಕಾನ್ಪುರ: ಬಿಜೆಪಿ ಮುಖಂಡನ ಸಹೋದರನ ಮದುವೆ ಸಮಾರಂಭದಲ್ಲಿ ಗುಂಡು ಹಾರಾಟದಿಂದಾಗಿ ಮುಸ್ಲಿಮ್ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನನ್ನು ಕಾನ್ಪುರದಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ರಾಮ್’ಜಿ ಗುಪ್ತಾ ಎಂಬಾತನ್ನು ಬಂಧಿಸಿದ್ದಾರೆ. ಮೃತನನ್ನು ಕಾನ್ಪುರ ಮೂಲದ ಸಾದಿಕ್ ಖುರೇಷಿ ಎಂದು ಗುರುತಿಸಲಾಗಿದೆ.

- Advertisement -

ಗುಂಡೇಟಿನಿಂದಾಗಿ ಗಂಭೀರವಾಗಿ ಗಾಯಗೊಂಡ ಸಾದಿಕ್ ರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಅಷ್ಟರಲ್ಲಿ ಗಾಯಾಳು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ಸಾದಿಕ್ ಸಹೋದರ ಸಾಜಿದ್ ಖುರೇಷಿ ಅವರು ನೀಡಿದ ದೂರಿನನ್ವಯ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 304 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಾನ್ಪುರ ಎಡಿಸಿಪಿ ಮನೀಶ್ ಚಂದ್ರ ಸೋಂಕರ್ ತಿಳಿಸಿದ್ದಾರೆ.

Join Whatsapp
Exit mobile version