Home ಟಾಪ್ ಸುದ್ದಿಗಳು ಜೈಶ್ರೀರಾಂ ಹೇಳುವಂತೆ ಒತ್ತಾಯಿಸಿ ಮುಸ್ಲಿಮ್ ವ್ಯಕ್ತಿಯ ಮೇಲೆ ಥಳಿತ : ಹಲ್ಲೆ ನಡೆಸದಂತೆ ಪುತ್ರಿ ಬೇಡಿಕೊಂಡರೂ...

ಜೈಶ್ರೀರಾಂ ಹೇಳುವಂತೆ ಒತ್ತಾಯಿಸಿ ಮುಸ್ಲಿಮ್ ವ್ಯಕ್ತಿಯ ಮೇಲೆ ಥಳಿತ : ಹಲ್ಲೆ ನಡೆಸದಂತೆ ಪುತ್ರಿ ಬೇಡಿಕೊಂಡರೂ ಕರಗದ ಮತಾಂಧರ ಮನಸ್ಸು !

ಲಕ್ನೋ: ಉತ್ತರ ಪ್ರದೇಶದ ಕಾನ್ಪುರ ಪಟ್ಟಣದಲ್ಲಿ 45 ವಯಸ್ಸಿನ ಮುಸ್ಲಿಮ್ ವ್ಯಕ್ತಿಯೊಬ್ಬರ ಮೇಲೆ ಜೈ ಶ್ರೀರಾಮ್ ಕೂಗುವಂತೆ ಬಲವಂತಪಡಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಹಲ್ಲೆಯ ಮೊದಲು ಸಂತ್ರಸ್ತ ವ್ಯಕ್ತಿಯ ಪುತ್ರಿಯ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಗಿದೆಯೆಂದು ಬಹಿರಂಗೊಂಡಿರುವ ವೀಡಿಯೋದಲ್ಲಿ ದಾಖಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಗಂಭೀರ ಗಾಯಗೊಂಡ ಅವರನ್ನು ಪೊಲೀಸರಿಗೆ ಒಪ್ಪಿಸಲಾಯಿತು ಎಂದು ಆತನ ಪುತ್ರಿ ಮಾಧ್ಯಮಕ್ಕೆ ತಿಳಿಸಿದ್ದಾಳೆ.

ಸ್ಥಳೀಯರು ಚಿತ್ರೀಕರಿಸಿದ ವೀಡಿಯೋದಲ್ಲಿ ಆ ವ್ಯಕ್ತಿಗೆ ಹೊಡೆಯುತ್ತಿದ್ದಾಗ ಮಗಳು ತನ್ನ ತಂದೆಯನ್ನು ಬಿಟ್ಟು ಬಿಡುವಂತೆ ದಾಳಿಕೋರ ಮತಾಂಧರಲ್ಲಿ ಬೇಡುತ್ತಿರುವುದು ಬಹಿರಂಗವಾಗಿದೆ. ಆದರೆ ಅದ್ಯಾವುದೂ ದುಷ್ತರ ಮನಸ್ಸನ್ನು ಕರಗಿಸಲಿಲ್ಲ. ಬಲಪಂಥೀಯ ಸಂಘಟನೆಯಾಗಿರುವ ಬಜರಂಜದಳದ ಕಾರ್ಯಕರ್ತರು ಈ ಪ್ರದೇಶದಲ್ಲಿ ಮುಸ್ಲಿಮರು ಹಿಂದೂ ಯುವತಿಯರನ್ನು ಮತಾಂತರಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿ ಈ ಹಲ್ಲೆ ನಡೆದಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಮೊದಲು ಬಜರಂಗದಳ 500 ಮೀಟರ್ ಅಣತಿ ದೂರದಲ್ಲಿ ಈ ಸಂಬಂಧ ಸಭೆ ನಡೆಸಿತ್ತು ಎಂದು ಹೇಳಲಾಗುತ್ತಿದೆ.

ಕಾನ್ಪುರ ಘಟನೆಯ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿಯ ದೂರಿನನ್ವಯ ಮದುವೆ ಬ್ಯಾಂಡ್ ಉದ್ಯಮಿ, ಆತನ ಮಗ ಮತ್ತು ಇತರ 10 ಅಪರಿಚಿತ ವ್ಯಕ್ತಿಗಳ ವಿರುದ್ಧ ಗಲಭೆಗೆ ಪಿತೂರಿಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇ – ರಿಕ್ಷಾ ಚಾಲಕನಾಗಿರುವ ವ್ಯಕ್ತಿಯನ್ನು ಆತನ ಕುಟುಂಬದೊಂದಿಗೆ ಕೊಲ್ಲುವ ಬೆದರಿಕೆಯೊಡ್ಡಿ ಹಲ್ಲೆ ನಡೆಸಲಾಗಿದೆಯೆಂದು ಸಂತ್ರಸ್ತ ವ್ಯಕ್ತಿ ಪೊಲೀಸರಲ್ಲಿ ದೂರಿದ್ದಾರೆ.

ಈ ಹಿಂದೆ ನಮ್ಮ ನೆರೆಕರೆಯ ಹಿಂದೂ ಕುಟುಂಬದೊಂದಿಗೆ ನಡೆದ ಸಣ್ಣ ಜಗಳ ಸಂಬಂಧ ಕಾನ್ಪುರ ಠಾಣೆಯಲ್ಲಿ ಕಳೆದ ಜುಲೈನಲ್ಲಿ ಪ್ರಕರಣವೊಂದು ದಾಖಲಾಗಿರುವ ಕುರಿತು ವಿವಾದ ತಾರತಕ್ಕೇರಿ ಈ ಹಲ್ಲೆ ನಡೆಸಲಾಗಿದೆಯೆಂದು ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದಾರೆ. ಆದರೆ ಸಂತ್ರಸ್ತ ವ್ಯಕ್ತಿಯ ಆರೋಪವನ್ನು ನಿರಾಕರಿಸಿರುವ ಬಜರಂಗದಳ, ಮುಸ್ಲಿಮ್ ಕುಟುಂಬದ ವಿರುದ್ಧ ಬಲವಂತದ ಮತಾಂತರದ ಆರೋಪ ಹೊರಿಸಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾನ್ಪುರ ಪೊಲೀಸರು ಸಂತ್ರಸ್ತ ನೀಡಿರುವ ದೂರಿನ ಆಧಾರದಲ್ಲಿ ಎಫ್.ಐ.ಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದೇವೆಂದು ಹಿರಿಯ ಪೊಲೀಸ್ ಅಧಿಕಾರಿ ರವೀನಾ ತ್ಯಾಗಿ ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version