Home ಟಾಪ್ ಸುದ್ದಿಗಳು ಗುರ್ಗಾಂವ್ ನಲ್ಲಿ ನಮಾಝ್ ಗೆ ಅಡ್ಡಿ: ಸಂಘಪರಿವಾರದ ವಿರುದ್ಧ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಮರು

ಗುರ್ಗಾಂವ್ ನಲ್ಲಿ ನಮಾಝ್ ಗೆ ಅಡ್ಡಿ: ಸಂಘಪರಿವಾರದ ವಿರುದ್ಧ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಮರು

ನವದೆಹಲಿ: ಶಕ್ರವಾರದ ನಮಾಝ್ ಗೆ ಅಡ್ಡಿಪಡಿಸುತ್ತಿರುವ ಸಂಘಪರಿವಾರದ ನಡೆಯನ್ನು ವಿರೋಧಿಸಿ ಮತ್ತು ನಮಾಝ್ ನಿರ್ವಹಣೆಗೆ ಅವಕಾಶ ನೀಡಬೇಕೆಂದು ಕೋರಿ ಸ್ಥಳೀಯ ಮುಸ್ಲಿಮರು ಸುಪ್ರೀಮ್ ಮೆಟ್ಟಿಲೇರಿದ್ದಾರೆ..

ರಾಜ್ಯಸಭಾ ಸಂಸದ ಮುಹಮ್ಮದ್ ಅದೀಬ್ ನೇತೃತ್ವದಲ್ಲಿ ಗುರ್ಗಾಂವ್ ಮುಸ್ಲಿಮ್ ಕೌನ್ಸಿಲ್, ಮುಸ್ಲಿಮರ ವಿರುದ್ಧ ಕೋಮು ಆಧಾರಿತ ಮತ್ತು ಹಿಂಸಾತ್ಮಕ ನಡೆಯನ್ನು ಕೈಬಿಡುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ಹರ್ಯಾಣ ಸರ್ಕಾರ ಮತ್ತು ಅಧಿಕಾರಿಗಳು ನಮಾಝ್ ಗೆ ಅಡ್ಡಿಪಡಿಸುವವರ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.

ಸದ್ಯ ಅಧಿಕಾರಿಗಳು ನಮಾಝ್ ನಿರ್ವಹಿಸಲು ಪ್ರತ್ಯೇಕ ಸ್ಥಳವನ್ನು ಮಂಜೂರು ಮಾಡದ ಕಾರಣ ತೆರೆದ ಸ್ಥಳದಲ್ಲಿ ನಮಾಝ್ ನಿರ್ವಹಿಸಲಾಗುತ್ತಿದ್ದು, ಕಳೆದ 3 ತಿಂಗಳಿನಿಂದ ಸಂಘಪರಿವಾರ ಕಾರ್ಯಕರ್ತರು ನಿರಂತರವಾಗಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ಸುಪ್ರೀಮ್ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Join Whatsapp
Exit mobile version