Home ಟಾಪ್ ಸುದ್ದಿಗಳು ಮುಸ್ಲಿಂ ಹುಡುಗಿಗೆ 15 ವರ್ಷ ತುಂಬಿದರೆ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಹಕ್ಕಿದೆ: ಪಂಜಾಬ್ ಮತ್ತು ಹರಿಯಾಣ...

ಮುಸ್ಲಿಂ ಹುಡುಗಿಗೆ 15 ವರ್ಷ ತುಂಬಿದರೆ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಹಕ್ಕಿದೆ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಚಂಢೀಗಡ: 15 ವರ್ಷ ತುಂಬಿದ ಮುಸ್ಲಿಂ ಮಹಿಳೆ ತನ್ನ ಸ್ವಂತ ಇಚ್ಛೆ ಮತ್ತು ಸಮ್ಮತಿಯ ಮೇರೆಗೆ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಬಹುದು ಮತ್ತು ಅಂತಹ ವಿವಾಹಕ್ಕೆ  ಬಾಲ್ಯವಿವಾಹ ನಿಷೇಧ ಕಾಯ್ದೆ ಅನ್ಯಯವಾಗುವುದಿಲ್ಲ. 15 ವರ್ಷ ತುಂಬಿದ ಮುಸ್ಲಿಂ ಮಹಿಳೆಯ ವಿವಾಹ ಕಾಯ್ದೆಯ 2006 ರ ಸೆಕ್ಷನ್ 12 ರ ಪ್ರಕಾರ ಅನೂರ್ಜಿತವಾಗುವುದಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪುನರುಚ್ಛರಿಸಿದೆ.

26 ವರ್ಷದ ಜಾವೇದ್ ತನ್ನ 16 ವರ್ಷದ ಪತ್ನಿಯನ್ನು ಮಕ್ಕಳ ಆರೈಕೆ ಏಜೆನ್ಸಿಯ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ವಿಕಾಸ್ ಬಹ್ಲ್  ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಹಮ್ಮದೀಯ ಕಾನೂನಿನ ಪ್ರಕಾರ ಅವರ ವಿವಾಹವು ಮಾನ್ಯವಾಗಿದೆ . ಆದ್ದರಿಂದ  ಅವರ ಕಸ್ಟಡಿಯನ್ನು  ಕಾನೂನುಬದ್ಧವಾಗಿ ಅರ್ಜಿದಾರರಿಗೆ ವಹಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ತನ್ನ ಹೆಂಡತಿಯೊಂದಿಗೆ ತನ್ನ ವಿವಾಹವನ್ನು ಎರಡೂ ಪಕ್ಷಗಳ ಮುಕ್ತ ಇಚ್ಛೆಯೊಂದಿಗೆ ನೆರವೇರಿಸಲಾಯಿತು ಮತ್ತು ಎರಡೂ ಪಕ್ಷಗಳು ಮುಸ್ಲಿಮರಾಗಿದ್ದರಿಂದ  ವಿವಾಹವು ಮಾನ್ಯವಾಗಿತ್ತು ಎಂದು ಅರ್ಜಿದಾರರು  ವಾದಿಸಿದ್ದರು.

Join Whatsapp
Exit mobile version