ಸಂಘಪರಿವಾರದ ಕಾರ್ಯಕರ್ತರಿಂದ ಮುಸ್ಲಿಮ್ ಉದ್ಯಮಿಗೆ ಮಾರಣಾಂತಿಕ ಹಲ್ಲೆ

Prasthutha|

ರಾಂಚಿ: ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮ್ ಉದ್ಯಮಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಾರ್ಖಂಡ್’ನ ಧನ್’ಬಾದ್ ಎಂಬಲ್ಲಿ ನಡೆದಿದೆ.
ಈ ಸಂಬಂಧದ ವೀಡಿಯೋ ಹೇಳಿಕೆ ಬಿಡುಗಡೆಗೊಳಿಸಿರುವ ಸಂತ್ರಸ್ತ ಉದ್ಯಮಿ ಅಕ್ರಂ ಖಾನ್ ಅವರು, ರೋಹಿತ್ ಎಂಬಾತ ಸುಮಾರು 25 ಬೆಂಬಲಿಗರೊಂದಿಗೆ ತನ್ನ ಅಂಗಡಿಗೆ ನುಗ್ಗಿ ವಿನಾಕಾರಣ ಕಬ್ಬಿಣದ ರಾಡ್ ಮತ್ತು ಲಾಠಿಯಿಂದ ಹಲ್ಲೆ ನಡೆಸಿರುವುದಾಗಿ ದೂರಿದ್ದಾರೆ.
ಸದ್ಯ ಈ ವೀಡಿಯೋ ವೈರಲ್ ಆಗಿದ್ದು, ರೋಹಿತ್ ಮತ್ತು 25 ಮಂದಿಯ ತಂಡ ತನ್ನ ಅಂಗಡಿಗೆ ನುಗ್ಗಿ ತನ್ನ ಮೇಲೆ ಕಬ್ಬಿಣದ ರಾಡ್ ಮತ್ತು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ತನ್ನ ತಲೆ ಮತ್ತು ಕಣ್ಣಿನ ಭಾಗಕ್ಕೆ ಗಂಭೀರವಾಗಿದೆ ಮತ್ತು ಅಧಿಕ ರಕ್ತಸ್ರಾವದಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಂಘಪರಿವಾರದ ಈ ಹೀನ ಕೃತ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.