Home ಟಾಪ್ ಸುದ್ದಿಗಳು ಮಸ್ಕತ್: “ಬ್ಯಾರಿ ಗೌಜಿ ಗಮ್ಮತ್” ಕುಟುಂಬ ಸಮ್ಮಿಲನ: ಒಮಾನ್’ನಲ್ಲಿ ಪದ್ಮಶ್ರೀ ಹಾಜಬ್ಬಗೆ ಅದ್ಧೂರಿಯ ಸ್ವಾಗತ

ಮಸ್ಕತ್: “ಬ್ಯಾರಿ ಗೌಜಿ ಗಮ್ಮತ್” ಕುಟುಂಬ ಸಮ್ಮಿಲನ: ಒಮಾನ್’ನಲ್ಲಿ ಪದ್ಮಶ್ರೀ ಹಾಜಬ್ಬಗೆ ಅದ್ಧೂರಿಯ ಸ್ವಾಗತ

ಮಸ್ಕತ್: ಇಂಡಿಯನ್ ಸೋಶಿಯಲ್ ಕ್ಲಬ್‌ ಒಮಾನ್ ಇದರ ಬ್ಯಾರಿ ವಿಂಗ್ ವತಿಯಿಂದ ಮಾರ್ಚ್ 3ರಂದು ಶುಕ್ರವಾರ ನಡೆಯಲಿರುವ ಬ್ಯಾರಿ ಗೌಜಿ ಗಮ್ಮತ್ ಕಲಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬರನ್ನು ಇಂದು ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.


ಈ ಸಂದರ್ಭದಲ್ಲಿ ಬ್ಯಾರಿ ವಿಂಗ್ ಪದಾಧಿಕಾರಿಗಳಾದ ಮೋನಬ್ಬ ಬ್ಯಾರಿ, ಸುಹೈಲ್, ಮುಹಮ್ಮದ್ ಮಸೂದ್, ಸಹಾಬುದ್ದೀನ್, ಅಬ್ದುಲ್ ರಹ್ಮಾನ್, ಮುಂತಾದವರು ಉಪಸ್ಥಿತರಿದ್ದರು.
ಗೌಜಿ ಗಮ್ಮತ್ ಕಾರ್ಯಕ್ರಮವು ಮಸ್ಕತ್’ನ ಬರ್ಕ ನಗರದ ಫಿರ್ದೌಸ್ ಫಾರ್ಮ್ ಹೌಸ್’ನಲ್ಲಿ ಮಾರ್ಚ್ 3ರ ಸಂಜೆ 4ಗಂಟೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಹರೇಕಳ ಹಾಜಬ್ಬರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಬ್ಯಾರಿ ಸಾಂಪ್ರದಾಯಿಕ ತಿಂಡಿ ತಿನಿಸು, ಆಟೋಟ ಸ್ಪರ್ಧೆ, ದಫ್ ಒಪ್ಪನ ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp
Exit mobile version