ಮ್ಯೂನಿಚ್: ಜರ್ಮನಿಯ ಪ್ರಸಿದ್ಧ ಬಾಕ್ಸರ್ ಮುಸಾ ಯಮಕ್ (38) ಅವರು ಬಾಕ್ಸಿಂಗ್ ರಿಂಗ್ ನಲ್ಲೇ ಪ್ರಾಣ ಬಿಟ್ಟಿದ್ದಾರೆ.
ಮೂಸಾ ಯಮಕ್ ಉಗಾಂಡದ ಹಂಜಾ ವಂಡೆರಾ ವಿರುದ್ಧ ಸೆಣಸುತ್ತಿದ್ದಾಗ ಈ ಘಟನೆ ನಡೆದಿದೆ. ಎರಡು ಸುತ್ತು ಮುಗಿದು ಮೂರನೇ ಸುತ್ತು ಆರಂಭಕ್ಕೆ ಮೊದಲೇ ಮೂಸಾ ರಿಂಗ್ ನಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಗಲೇ ಮುಸಾ ಯಮಕ್ ನಿಧನ ಹೊಂದಿದ್ದರು.
ಯುರೋಪಿಯನ್ ಮತ್ತು ಏಷ್ಯನ್ ಚಾಂಪಿಯನ್ ಶಿಪ್ ಗಳನ್ನು ಗೆದ್ದ ಅಲುಕ್ರಾದ ಬಾಕ್ಸರ್ ಮೂಸಾ ಅಸ್ಕಾನ್ ಯಮಕ್ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದೇವೆ ಎಂದು ಟರ್ಕಿಯ ಅಧಿಕಾರಿ ಹಸನ್ ತುರಾನ್ ಟ್ವೀಟ್ ಮಾಡಿದ್ದಾರೆ.