ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ನಗರದಲ್ಲಿ ವಿಚಾರಣೆಗಾಗಿ 5 ವರ್ಷದ ಕೊಲೆಯತ್ನ ಪ್ರಕರಣದ ಆರೋಪಿಯೊಬ್ಬನನ್ನು ನ್ಯಾಯಾಲಯಕ್ಕೆ ಕರೆತರುವಾಗ ಪೊಲೀಸ್ ವ್ಯಾನ್ ನಲ್ಲೇ ಕೂತು ಹುಟ್ಟುಹಬ್ಬದ ಕೇಕ್ ಕತ್ತರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಉಲ್ಲಾಸನಗರದ ರೋಷನ್ ಝಾ ಎಂಬ ಆರೋಪಿ, ನ್ಯಾಯಾಲಯದ ಆವರಣದ ಬಳಿ ನಿಲ್ಲಿಸಿದ್ದ ಪೊಲೀಸ್ ಬೆಂಗಾವಲು ವಾಹನದ ಕಿಟಕಿಯ ಮೂಲಕ ಆತನ ಸ್ನೇಹಿತರು ತಂದ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ.
ಈ ಕುರಿತು ಪ್ರತಿಕ್ರಯಿಸಿದ ಪೊಲೀಸ್ ಆಯುಕ್ತರು, ಆರೋಪಿಯಿಂದ ಇಂತಹ ಕಾರ್ಯಕ್ಕೆ ಅನುವು ಮಾಡಿಕೊಟ್ಟ ಪೊಲೀಸರ ವಿರುದ್ಧ ಇಲಾಖಾ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಆತನನ್ನು ನ್ಯಾಯಾಲಯಕ್ಕೆ ಕರೆತಂದ ಪೊಲೀಸ್ ಬೆಂಗಾವಲು ತಂಡವು ಥಾಣೆ ಗ್ರಾಮೀಣ ಪೊಲೀಸರಿಗೆ ಸೇರಿದ್ದು. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ