Home ಟಾಪ್ ಸುದ್ದಿಗಳು ಪೌರತ್ವ ಬಯಸುವ ಪುರುಷರ ಧರ್ಮವನ್ನು ಪತ್ತೆ ಮಾಡಲು ‘ಮುಂಜಿ’ ಪರೀಕ್ಷೆ: ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ

ಪೌರತ್ವ ಬಯಸುವ ಪುರುಷರ ಧರ್ಮವನ್ನು ಪತ್ತೆ ಮಾಡಲು ‘ಮುಂಜಿ’ ಪರೀಕ್ಷೆ: ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ

ಕೊಲ್ಕತ್ತಾ: ಪೌರತ್ವ ಬಯಸುವ ಪುರುಷರ ಧರ್ಮವನ್ನು ಪತ್ತೆ ಮಾಡಲು ಮುಂಜಿ ಪರೀಕ್ಷೆ ನಡೆಸುವುದನ್ನು ಕಡ್ಡಾಯ ಮಾಡಬೇಕು ಎಂದು ಬಿಜೆಪಿ ಮುಖಂಡ ತಥಾಗತ ರಾಯ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಬೇರೆ ದೇಶಗಳಿಂದ ಆಗಮಿಸಿದ ಹಿಂದೂ, ಬೌದ್ಧ ಅಥವಾ ಕ್ರಿಶ್ಚಿಯನ್ನರು ಪೌರತ್ವಕ್ಕೆ ಅರ್ಹರು. ಪೌರತ್ವ ಬಯಸುವ ಪುರುಷರ ಧರ್ಮದ ಸ್ಥಾನಮಾನದ ಪರೀಕ್ಷೆಗೆ ಸುನ್ನತಿ ಪರೀಕ್ಷೆ ಅಥವಾ ಇತರ ಪರೀಕ್ಷೆ ನಡೆಸಬೇಕು. ಹಿಂದೂ ಎಂದು ಕಂಡುಬರುವ ಪುರುಷರ ಜತೆಗೆ ಇರುವ ಮಹಿಳೆಯರೂ ಪೌರತ್ವಕ್ಕೆ ಅರ್ಹರು” ಎಂದು ರಾಯ್ ಅಭಿಪ್ರಾಯಪಟ್ಟಿದ್ದಾರೆ.

ಈ ಹೇಳಿಕೆಯನ್ನು ತೀರಾ ಅಶ್ಲೀಲಕರ ಎಂದು ಬಣ್ಣಿಸಿರುವ ಟಿಎಂಸಿ, ಇದು ಬಿಜೆಪಿ ಮುನ್ನಲೆಗೆ ತರಲು ಬಯಸಿರುವ ನಿರೂಪಣೆ ಎಂದು ಲೇವಡಿ ಮಾಡಿದೆ.

Join Whatsapp
Exit mobile version