Home ಟಾಪ್ ಸುದ್ದಿಗಳು ನಿರ್ಮಲಾನಂದನಾಥ ಸ್ವಾಮಿ ಭೇಟಿ ಬೆನ್ನಲೇ ಮುನಿರತ್ನ ಯೂಟರ್ನ್: ಉರಿಗೌಡ – ನಂಜೇಗೌಡ ಸಿನಿಮಾ ಕ್ಯಾನ್ಸಲ್

ನಿರ್ಮಲಾನಂದನಾಥ ಸ್ವಾಮಿ ಭೇಟಿ ಬೆನ್ನಲೇ ಮುನಿರತ್ನ ಯೂಟರ್ನ್: ಉರಿಗೌಡ – ನಂಜೇಗೌಡ ಸಿನಿಮಾ ಕ್ಯಾನ್ಸಲ್

►ಉರಿ ಗೌಡ, ನಂಜೇಗೌಡ ವಿರುದ್ಧ ಮಾತು ಬೇಡ; ರಾಜಕೀಯ ನಾಯಕರಿಗೆ ಸ್ವಾಮಿ ತಾಕೀತು


ಬೆಂಗಳೂರು: ನಿರ್ಮಲಾನಂದ ಸ್ವಾಮಿ ಭೇಟಿ ಬಳಿಕ ಸಚಿವ ಮುನಿರತ್ನ ಯೂಟರ್ನ್ ಹೊಡೆದಿದ್ದು, ಉರಿಗೌಡ ನಂಜೇಗೌಡ ಚಿತ್ರ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ವಿವಾದಿತ ಪಾತ್ರಗಳಾಗಿ ಚರ್ಚೆಯಲ್ಲಿರುವ ಉರಿಗೌಡ-ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನು ಆಧರಿಸಿದ ಸಿನಿಮಾ ಮಾಡಲು ಮುನಿರತ್ನ ಟೈಟಲ್ ರಿಜಿಸ್ಟರ್’ಗೆ ಅರ್ಜಿ ಹಾಕಿದ್ದರು. ಅಲ್ಲದೇ ಸಿನಿಮಾದ ಮುಹೂರ್ತ ದಿನಾಂಕವನ್ನೂ ಘೋಷಿಸಿಬಿಟ್ಟಿದ್ದರು. ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಮುನಿರತ್ನ, ಮೇ 18 ರಂದು ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತ ಮಾಡಲಾಗುವುದು ಎಂದಿದ್ದರು. ಆದರೆ ಇದಕ್ಕೆಲ್ಲ ಬ್ರೇಕ್ ಬಿದ್ದಿದ್ದು, ಸಿನಿಮಾ ಮಾಡಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಒಕ್ಕಲಿಗರನ್ನು ಖಳನಾಯಕರಾಗಿ ಚಿತ್ರಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಚಿತ್ರದ ವಿರುದ್ಧ ಧ್ವನಿ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ನಿರ್ಮಲಾನಂದ ಸ್ವಾಮೀಜಿ ಸಚಿವ ಮುನಿರತ್ನ ಅವರನ್ನು ಕರೆಸಿ ತರಾಟೆಗೆ ತೆಗೆದುಕೊಂಡು, ಚಿತ್ರ ನಿರ್ಮಿಸದಂತೆ ತಾಕೀತು ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ಮುನಿರತ್ನ ಯೂಟರ್ನ್ ಹೊಡೆದಿದ್ದಾರೆ.

Join Whatsapp
Exit mobile version