ನವದೆಹಲಿ : ಹಿಂದೂ ದೇವ-ದೇವತೆಗಳನ್ನು ಅವಮಾನಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಸ್ಟಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಈ ಸಂಬಂಧ ಮಧ್ಯಪ್ರದೇಶ ಸರಕಾರಕ್ಕೆ ಕೋರ್ಟ್ ನೋಟಿಸ್ ಕೂಡ ಜಾರಿಗೊಳಿಸಿದೆ.
ಮುನಾವರ್ ಫಾರೂಕಿಗೆ ಇದಕ್ಕೂ ಮೊದಲು ಮಧ್ಯಪ್ರದೇಶ ಹೈಕೋರ್ಟ್ ಸೇರಿದಂತೆ ಮೂರು ಬಾರಿ ಜಾಮೀನು ನಿರಾಕರಿಸಲಾಗಿತ್ತು.
ಬಿಜೆಪಿ ಶಾಸಕರೊಬ್ಬರ ದೂರಿನ ಆಧಾರದಲ್ಲಿ ಮುನಾವರ್ ಫಾರೂಕಿ ಅವರನ್ನು ಜ.1ರಂದು ಬಂಧಿಸಲಾಗಿತ್ತು. ಅವರ ಜೊತೆ ಇತರ ನಾಲ್ವರನ್ನೂ ಬಂಧಿಸಲಾಗಿತ್ತು.
ಹಿಂದೂ ದೇವ, ದೇವತೆಗಳು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಎಲ್ಲಾ ಬಂಧಿತರು ಅವಮಾನಕಾರಿ ಹಾಸ್ಯಗಳನ್ನು ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಆದರೆ, ಈ ಬಗ್ಗೆ ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸ್ಥಳೀಯ ಪೊಲೀಸ್ ವರಿಷ್ಠರೇ ಹೇಳಿದ್ದರು.