ಟಿ.ಆರ್.ಪಿ ಹಗರಣ: ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಿಪಬ್ಲಿಕ್ ಟಿವಿ ಕೋರಿಕೆಗೆ ಮುಂಬೈ ಪೊಲೀಸ್ ವಿರೋಧ

Prasthutha News

ಮುಂಬೈ: ರಿಪಬ್ಲಿಕ್ ಟಿ.ವಿ ಟಿ.ಆರ್.ಪಿ ಹಗರಣಕ್ಕೆ ಸಂಬಂಧಿಸಿದ ಹೊಸ ಬೆಳವಣಿಗೆಯಲ್ಲಿ ವೀಕ್ಷಕತ್ವ ದರವನ್ನು ಹೆಚ್ಚಿಸುವ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಚಾನೆಲ್ ನ ಕೋರಿಕೆಯನ್ನು ಮುಂಬೈ ಪೊಲೀಸರು ವಿರೋಧಿಸಿದ್ದಾರೆ.

ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಹೆಚ್ಚುವರಿ ಅರ್ಜಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ತನಿಖೆಗೆ ಅಡ್ಡಿಯುಂಟುಮಾಡಲು ಚಾನೆಲ್ ಪ್ರಯತ್ನಿಸುತ್ತಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

“ತನಿಖೆಯನ್ನು ಸಿಬಿಐ ಗೆ ವರ್ಗಾಯಿಸಲು ರಿಪಬ್ಲಿಕ್ ಟಿವಿ ಕೋರಿಕೆಯು ಒಂದು ಕೆಟ್ಟ ಯೋಜನೆಯಾಗಿದೆ. ರಿಪಬ್ಲಿಕ್ ಟಿ.ವಿ ನಕಲಿ ಟಿ.ಆರ್.ಪಿ ದರದ ತನಿಖೆಗೆ ಅಡ್ಡಿಯುಂಟುಮಾಡಲು ಬಯಸುತ್ತಿದೆ. ಮಾಧ್ಯಮ ವಿಚಾರಣೆಯು ಸ್ವತಂತ್ರ ಮತ್ತು ನ್ಯಾಯೋಚಿತ ತನಿಖೆಗೆ ವಿರುದ್ಧವಾಗಿದೆ. ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ನಡೆಸುವ ಕಾರ್ಯಕ್ರಮಗಳಲ್ಲಿ ಈ ಪ್ರಕರಣವನ್ನು ನಿರಂತರವಾಗಿ ಚರ್ಚಿಸಲಾಗುತ್ತಿದೆ. ಸಾಕ್ಷಿಗಳನ್ನು ಸಂಪರ್ಕಿಸಲಾಗುತಿದೆ ಮತ್ತು ಹಸ್ತಕ್ಷೇಪ ಮಾಡಲಾಗುತ್ತಿದೆ ಹಾಗೂ ಬೆದರಿಸಲಾಗುತ್ತಿದೆ” ಎಂದು ಮುಂಬೈ ಪೊಲೀಸರು ಅಫಿದವಿತ್ ನಲ್ಲಿ ತಿಳಿಸಿದ್ದಾರೆ.


Prasthutha News