Home ಟಾಪ್ ಸುದ್ದಿಗಳು ಅಂಬಾನಿ ಮನೆ ಮುಂದೆ ಬಾಂಬ್ ಪತ್ತೆ ಪ್ರಕರಣ | ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಮಾನೆ...

ಅಂಬಾನಿ ಮನೆ ಮುಂದೆ ಬಾಂಬ್ ಪತ್ತೆ ಪ್ರಕರಣ | ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಮಾನೆ ಬಂಧನ

ಮುಂಬೈ: ಮುಖೇಶ್ ಅಂಬಾನಿಯ ಮನೆ ಮುಂದೆ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಇನ್ಸ್‌ಪೆಕ್ಟರ್ ಸುನಿಲ್ ಮಾನೆ ಅವರನ್ನು NIA ಬಂಧಿಸಿದೆ.

ಈ ಹಿಂದೆ ಬಂಧನಕ್ಕೊಳಗಾಗಿ ಅಮಾನತುಗೊಂಡಿರುವ ಮುಂಬೈ ಕ್ರೈಂ ಬ್ರಾಂಚ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ಮತ್ತು ಪೊಲೀಸ್ ಎಪಿಐ ರಿಯಾಝ್ ಖಾಝಿ ಅವರ ಹೇಳಿಕೆಗಳ ಆಧಾರದ ಮೇಲೆ ಸುನಿಲ್ ಮಾನೆ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಚಕ್ಕಾಲದಲ್ಲಿ ನಡೆದ ರಿಯಾಝ್ ಖಾಝಿ ಮತ್ತು ಸಚಿನ್ ವಾಝೆ ನಡುವಿನ ಭೇಟಿಯ ವೇಳೆ ಸುನಿಲ್ ಮಾನೆ ಹಾಜರಿದ್ದರು ಎನ್ನಲಾಗಿದ್ದು, ಸಚಿನ್ ವಾಝೆ ಅವರ ಬಳಿ ದೊರೆತ ಸಿಮ್ ಕಾರ್ಡ್‌ಗಳನ್ನು ಇತರ ಅಧಿಕಾರಿಗಳಿಗೆ ಹಸ್ತಾಂತರಿಸುವಲ್ಲಿ ಸುನಿಲ್ ಮಾನೆ ಭಾಗಿಯಾಗಿದ್ದರು. ಬಾಂಬ್ ಪತ್ತೆ ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮನ್ಸುಖ್ ಹಿರೇನ್ ಅವರನ್ನು ಸುನಿಲ್ ಮಾನೆ ಒತ್ತಾಯಿಸಿದ್ದರು ಎನ್ನಲಾಗಿದೆ.

Join Whatsapp
Exit mobile version