Home ಟಾಪ್ ಸುದ್ದಿಗಳು ಮಹಿಳೆಗೆ ಕಿರುಕುಳ ಆರೋಪ | ಶಿವಸೇನೆ ಮುಖಂಡ ಸಂಜಯ್ ರಾವುತ್ ವಿಚಾರಣೆಗೆ ಮುಂಬೈ ಹೈಕೋರ್ಟ್ ಆದೇಶ

ಮಹಿಳೆಗೆ ಕಿರುಕುಳ ಆರೋಪ | ಶಿವಸೇನೆ ಮುಖಂಡ ಸಂಜಯ್ ರಾವುತ್ ವಿಚಾರಣೆಗೆ ಮುಂಬೈ ಹೈಕೋರ್ಟ್ ಆದೇಶ

ಮುಂಬೈ: ಶಿವಸೇನೆ ಸಂಸದ ಸಂಜಯ್ ರಾವ್ ವಿರುದ್ಧದ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಮುಂಬೈ ಹೈಕೋರ್ಟ್ ಮುಂಬೈ ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದು, ಜೂನ್ 24 ರೊಳಗೆ ಆರೋಪದ ಬಗ್ಗೆ ವಿವರವಾದ ವರದಿಯನ್ನು ಹೈಕೋರ್ಟ್ ಕೇಳಿದೆ.

ಮನೋವೈದ್ಯರಾಗಿ ಕೆಲಸ ಮಾಡುತ್ತಿರುವ ಮಹಿಳೆಯ ಮೇಲೆ ನಿಗಾ ಇಟ್ಟು ಹಿಂಬಾಲಿಸಲು ಜನರನ್ನು ಕಳುಹಿಸಿದ್ದಾರೆ ಎಂಬುದು ಸಂಜಯ್ ರಾವ್ ವಿರುದ್ಧ ಮಹಿಳೆ ಮಾಡಿದ ಒಂದು ಆರೋಪವಾಗಿದೆ. ಮಹಿಳೆಯನ್ನು ಸಾರ್ವಜನಿಕವಾಗಿ ನಿಂದಿಸಿ, ಬೆದರಿಕೆಯೊಡ್ಡಿ ಕೊಲ್ಲಲು ಯತ್ನಿಸಿದ್ದಾರೆ ಎಂಬುದು ಮತ್ತೊಂದು ಆರೋಪ.

ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸಂತ್ರಸ್ತೆ ಸ್ವತಃ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸಿದೆ. ಸಂಜಯ್ ರಾವತ್ ತನ್ನ ಜೀವನವನ್ನು ವರ್ಷಗಳ ಕಾಲ ನರಕದಂತೆ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ನಿಲೇಶ್ ಆರ್ ರಾಣೆ, ‘ಮರಾಠಿ ಮಾಧ್ಯಮಗಳು ಇದನ್ನು ಮುಚ್ಚಿಡುತ್ತಿರುವುದರಿಂದ ಈ ಸುದ್ದಿಯನ್ನು ಸಾಧ್ಯವಾದಷ್ಟು ಪ್ರಸಾರ ಮಾಡಬೇಕೆಂದು ಮನವಿ ಮಾಡಿದ್ದಾರೆ. ಎರಡು ವಾರಗಳ ಹಿಂದೆ ಈ ಅಮಾಯಕ ಮಹಿಳೆಯನ್ನು ಬಂಧಿಸಲಾಗಿದೆ. ಸಂಜಯ್ ರಾವುತ್ ಈ ಮಹಿಳೆಯ ಜೀವನವನ್ನು ವರ್ಷಗಳಿಂದ ನರಕದಂತೆ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version