Home ಟಾಪ್ ಸುದ್ದಿಗಳು ಕೋರ್ಟ್ ಹಾಜರಾತಿಯಿಂದ ಶಾಶ್ವತ ವಿನಾಯಿತಿಗೆ ಕಂಗನಾ ರನೌತ್ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಮುಂಬೈ ಕೋರ್ಟ್

ಕೋರ್ಟ್ ಹಾಜರಾತಿಯಿಂದ ಶಾಶ್ವತ ವಿನಾಯಿತಿಗೆ ಕಂಗನಾ ರನೌತ್ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಮುಂಬೈ ಕೋರ್ಟ್

► ಕಂಗನಾ ನಟಿಯಾಗಿರಬಹುದು, ಆದರೆ ಒಂದು ಪ್ರಕರಣದ ಆರೋಪಿಯೆಂಬುವುದನ್ನು ಮರೆಯಬಾರದು

ಮುಂಬೈ: ತಾನು ಹಿಂದಿ ಸಿನಿಮಾ ರಂಗದ ಒಬ್ಬಳು ನಟಿಯಾಗಿದ್ದು, ದೇಶ – ವಿದೇಶಗಳಿಗೆ ಚಲನಚಿತ್ರಾ ಕಾರ್ಯದ ಪ್ರಯುಕ್ತ ಸಂಚರಿಸಬೇಕಾಗುತ್ತದೆ. ಆದ್ದರಿಂದ ಕೋರ್ಟ್ ಹಾಜರಾತಿಯಿಂದ ಶಾಶ್ವತ ವಿನಾಯಿತಿ ನೀಡಬೇಕು’ ಎಂದು ಕೋರಿದ್ದ ಅರ್ಜಿಯನ್ನು ಮುಂಬೈ ಸ್ಥಳೀಯ ಕೋರ್ಟ್ ತಿರಸ್ಕರಿಸಿದೆ.

ಅರ್ಜಿಯನ್ನು ವಜಾಗೊಳಿಸಿದ ಅಂಧೇರಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್‌ ಆರ್‌ ಖಾನ್ ” ಕಂಗನಾ ರನೌತ್ ಒಬ್ಬ ನಟಿಯಾಗಿರಬಹುದು. ಆದರೆ ಒಂದು ಪ್ರಕರಣದ ಆರೋಪಿಯೆಂಬುವುದನ್ನು ಮರೆಯಬಾರದು. ಆರೋಪಿಯು ತನಗಿಷ್ಟ ಬಂದಹಾಗೆ ವರ್ತಿಸಲು ಅವಕಾಶ ಇಲ್ಲ. ಸದ್ಯಕ್ಕೆ ಅವರು ವಿಚಾರಣೆಯಿಂದ ಶಾಶ್ವತ ವಿನಾಯಿತಿ ಕೋರುವಂತಿಲ್ಲ” ಎಂದಿದ್ದಾರೆ.

ಬಾಲಿವುಡ್‌ ಸಂಗೀತ ರಚನಾಗಾರ ಜಾವೇದ್‌ ಅಖ್ತರ್‌ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಎದುರಿಸುತ್ತಿರುವ ಕಂಗನಾ, ಶಾಶ್ವತ ವಿನಾಯಿತಿಗೆ ಅರ್ಜಿ ಕೋರಿದ್ದರು.

Join Whatsapp
Exit mobile version