Home ಟಾಪ್ ಸುದ್ದಿಗಳು 2009ರ ಕೊಲೆ ಪ್ರಕರಣ| ಛೋಟಾ ರಾಜನ್‌ ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ

2009ರ ಕೊಲೆ ಪ್ರಕರಣ| ಛೋಟಾ ರಾಜನ್‌ ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ

ಮುಂಬೈ: ಕೊಲೆ ಪ್ರಕರಣವೊಂದರಲ್ಲಿ ಛೋಟಾ ರಾಜನ್‌ ಹಾಗೂ ಇತರ ಮೂವರು ಆರೋಪಿಗಳನ್ನು ಸಿಬಿಐನ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ.

 2009ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ‌ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದ್ದರಿಂದ ಛೋಟಾ ರಾಜನ್‌ ಹಾಗೂ ಮೊಹಮ್ಮದ್ ಅಲಿ ಶೇಖ್, ಉಮೈದ್ ಶೇಖ್ ಮತ್ತು ಪ್ರಣಯ್ ರಾಣೆ ಅವರನ್ನು ವಿಶೇಷ ನ್ಯಾಯಾಧೀಶ ಎ.ಎಂ. ಪಾಟೀಲ್‌ ಅವರು ಖುಲಾಸೆಗೊಳಿಸಿದ್ದಾರೆ.

‘2009ರ ಜುಲೈನಲ್ಲಿ ಸಾಹಿದ್‌ ಗುಲಾಮ್‌ ಹುಸೇನ್‌ ಅಲಿಯಾಸ್‌ ಛೋಟೆ ಮಿಯಾ ಎಂಬಾತನನ್ನು ಇಬ್ಬರು ವ್ಯಕ್ತಿಗಳು ದಕ್ಷಿಣ ಮುಂಬೈನ ನಾಗಪಾಡಾದಲ್ಲಿ ಗುಂಡಿಟ್ಟು ಕೊಂದು ಪರಾರಿಯಾಗುವ ವೇಳೆ ಬೇರೆ ಮೂವರು ವ್ಯಕ್ತಿಗಳನ್ನು ಕೊಂದಿದ್ದರು.

Join Whatsapp
Exit mobile version