ಮುಲ್ಕಿ: ತಲೆ ಮರೆಸಿಕೊಂಡ ಕೊಲೆ ಆರೋಪಿ ಪತ್ತೆಗೆ ಸಹಕರಿಸಲು ಮನವಿ

ಮಂಗಳೂರು: ಮುಲ್ಕಿಯಲ್ಲಿ ನಡೆದಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ವ್ಯಕ್ತಿಯ ಪತ್ತೆಗೆ ಸಹಕರಿಸಬೇಕೆಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ 1ನೆ ಆರೋಪಿ ಬಪ್ಪನಾಡು ನಿವಾಸಿ ದಾವೂದ್ ಹಕೀಮ್ ವಿರುದ್ಧ ಸಂ. 38/2020 ಕಲಂ 143, 147, 148, 341, 307, 302, 395 ಜೊತೆಗೆ 149 ಐಪಿಸಿ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಈತನನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಈಗಾಗಲೇ ನ್ಯಾಯಾಲಯವು ಹಲವು ಬಾರಿ ದಸ್ತಗಿರಿ ವಾರೆಂಟ್ ಹೊರಡಿಸಿದೆ. ಅಲ್ಲದೆ,ಈತನ ವಿರುದ್ಧ ನ್ಯಾಯಾಲಯವು ಪ್ರೋಕ್ಲಮೇಶನ್ ಕೂಡ ಹೊರಡಿಸಿದೆ. ಆದರೆ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ.

- Advertisement -


ಆರೋಪಿಯು ಈವರೆಗೆ ಪತ್ತೆಯಾಗದೆ ಇರುವುದರಿಂದ ಈ ಕೆಳಗಿನ ಚಹರೆ ಇರುವ ವ್ಯಕ್ತಿಯು ಕಂಡು ಬಂದರೆ ಮುಲ್ಕಿ ಪೊಲೀಸ್ ಠಾಣೆ: 9480805332, ಪೊಲೀಸ್ ಉಪ ನಿರೀಕ್ಷಕರು ಮುಲ್ಕಿ ಪೊಲೀಸ್ ಠಾಣೆ 9480805359 ಈ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲು ಕೋರಲಾಗಿದೆ.

- Advertisement -