ಇಬ್ಬರು ಯುವಕರು ಟ್ಯಾಕ್ಸಿ ಚಾಲಕನೋರ್ವನಲ್ಲಿ ಉದ್ಯಮಿ ಮುಖೇಶ್ ಅಂಬಾನಿಯ ಮನೆಯ ವಿಳಾಸ ವಿಚಾರಿಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಅಂಬಾನಿಯವರ ನಿವಾಸ ‘ಆಂಟಿಲಿಯಾ’ಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಪೊಲೀಸ್ ನಿಯಂತ್ರಣ ಕೊಠಡಿಗೆ ಸೋಮವಾರ ಕರೆ ಮಾಡಿದ ಟ್ಯಾಕ್ಸಿ ಚಾಲಕ, ತನ್ನ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಉದ್ಯಮಿ ಮುಖೇಶ್ ಅಂಬಾನಿಯ ಮನೆಯ ವಿಳಾಸ ವಿಚಾರಿಸಿದ್ದಾರೆ. ಭಾರಿ ಗಾತ್ರದ ಎರಡು ಬ್ಯಾಗ್ ಅವರ ಜೊತೆಗಿತ್ತು ಎಂದು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮುಖೇಶ್ ಅಂಬಾನಿಯವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್’ಗಳನ್ನು ಹಾಕಲಾಗಿದ್ದು, ಹೆಚ್ಚುವರಿ ಪೊಲೀಸರುನ್ನು ನಿಯೋಜಿಸಲಾಗಿದೆ. ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಇಬ್ಬರಿಗಾಗಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.