Home ಟಾಪ್ ಸುದ್ದಿಗಳು ಮುಹರ್ರಂ ಆಚರಣೆ: ವಿದ್ಯುತ್ ತಂತಿ ತಗುಲಿ ಇಬ್ಬರು ಸ್ಥಳದಲ್ಲೇ ಸಾವು, 10 ಜನರಿಗೆ ಗಾಯ

ಮುಹರ್ರಂ ಆಚರಣೆ: ವಿದ್ಯುತ್ ತಂತಿ ತಗುಲಿ ಇಬ್ಬರು ಸ್ಥಳದಲ್ಲೇ ಸಾವು, 10 ಜನರಿಗೆ ಗಾಯ

ರಾಜ್ಕೋಟ್ : ಗುಜರಾತ್ ನ ಜಾಮ್ ನಗರದಲ್ಲಿ ಮೊಹರಂ ಅಂಗವಾಗಿ ಸೋಮವಾರ ರಾತ್ರಿ ನಡೆದ ‘ತಾಜಿಯಾ’ ಮೆರವಣಿಗೆಯ ವೇಳೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಇಬ್ಬರು ವ್ಯಕ್ತಿಗಳು ವಿದ್ಯುದಾಘಾತಕ್ಕೊಳಗಾಗಿ ಮೃತಪಟ್ಟಿದ್ದು, ಇತರ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರನ್ನು ಜಾಮ್ನಗರದ ಧರಾರ್ ನಗರದ ನಿವಾಸಿಗಳಾದ ಆಸಿಫ್ ಮಲಿಕ್ (23) ಮತ್ತು ಮುಹಮ್ಮದ್ ವಾಹಿದ್ ಪಠಾಣ್ (20) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಮ್ ನಗರದ ‘ಬಿ’ ಡಿವಿಷನ್ ಪೊಲೀಸ್ ಠಾಣೆಯ ವ್ಯಾಪ್ತಿಯ ಜಾಮ್ ನಗರದ ಧಾರಾರ್ ನಗರ-2 ಪ್ರದೇಶದಲ್ಲಿ ರಾತ್ರಿ 11.15 ರ ಸುಮಾರಿಗೆ ಈ ಘಟನೆ ನಡೆದಿದ್ದು, ಓವರ್ ಹೆಡ್ ಲೈವ್ ವಿದ್ಯುತ್ ತಂತಿಗೆ ಕೋಲು ತಗುಲಿದ ನಂತರ ಇಬ್ಬರೂ ವಿದ್ಯುತ್ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version