ರಾಂಚಿ: ನನ್ನ ಮಗ ಸತ್ಯಕ್ಕಾಗಿ ಮರಣಿಸಿದ್ದಾನೆ. ಆತನ ಹುತಾತ್ಮತೆಯಲ್ಲಿ ನನಗೆ ಯಾವುದೇ ದುಃಖವಿಲ್ಲ, ಬದಲಾಗಿ ಹೆಮ್ಮೆ ಇದೆ ಎಂದು ರಾಂಚಿಯಲ್ಲಿ ಗುಂಡೇಟಿನಿಂದ ಮೃತಪಟ್ಟ ಮುದಸ್ಸಿರ್ ಎಂಬ ಬಾಲಕನ ತಾಯಿ ಹೇಳಿದ್ದಾರೆ.
ಪ್ರವಾದಿ ನಿಂದನೆ ವಿರುದ್ಧ ಶುಕ್ರವಾರ ರಾಂಚಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಗುಂಡೇಟಿಗೆ 17 ವರ್ಷ ಪ್ರಾಯದ ಮುದಸ್ಸಿರ್ ಮೃತಪಟ್ಟಿದ್ದರು.