ಬೆಂಗಳೂರು: ತಮ್ಮ ಪತ್ನಿಗೆ ಮೂಡಾದಲ್ಲಿ ನೀಡಿರುವ ನಿವೇಶನ ಕಾನೂನು ಪ್ರಕಾರವೇ ನೀಡಲಾಗಿದೆ. ಬಿಜೆಪಿ ಅವಧಿಯಲ್ಲಿ ಈ ನಿವೇಶನ ಹಂಚಿಕೆ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ತಮ್ಮ ಧರ್ಮ ಪತ್ನಿ ಹೆಸರಿನಲ್ಲಿ ನಿಯಮ ಬಾಹಿರವಾಗಿ ಮುಡಾ ನಿವೇಶನ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಅವಧಿಯಲ್ಲಿ ಕೊಟ್ಟಿರೋ ನಿವೇಶನ ಇದು. ನನ್ನ ಬಾಮೈದ ತನ್ನ ಜಾಗವನ್ನ ನನ್ನ ಹೆಂಡತಿಗೆ ಅರಿಶಿನ-ಕುಂಕುಮಕ್ಕೆ ಅಂತ ಗಿಫ್ಟ್ ಡೀಡ್ ಮಾಡಿದ್ರು. ಈ ಜಾಗವನ್ನ ಮುಡಾದವರು ಯಾವುದೇ ಮಾಹಿತಿ ಇಲ್ಲದೆ ಅಕ್ವೈರ್ ಮಾಡಿಕೊಂಡು ಸೈಟ್ ಮಾಡಿದ್ದಾರೆ. ಆಗ ನಮ್ಮ ಜಮೀನಿಗೆ ಪರಿಹಾರ ಕೊಡಿ ಅಂತ ನಾವು ಕೇಳಿದಾಗ ಬದಲಿ ನಿವೇಶನ ಕೊಡೋದಾಗಿ ಹೇಳಿದ್ರು. ಅದರಂತೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಆಗಿದೆ. ಇದು ತಪ್ಪಾ?ಅಂತ ಪ್ರಶ್ನೆ ಮಾಡಿದ್ದಾರೆ.
ನಿವೇಶನ ಹಂಚಿಕೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ.ಕಾನೂನು ಪ್ರಕಾರವೇ ಇದು ಹಂಚಿಕೆ ಆಗಿದೆ ಎಂದರು.