Home ಟಾಪ್ ಸುದ್ದಿಗಳು ಪ್ರಧಾನ ಮಂತ್ರಿಯ ಸ್ನೇಹಿತ ಅದಾನಿಯಿಂದಾಗಿ ಎಂಎಸ್ ಪಿ ಜಾರಿಗೆ ಬಂದಿಲ್ಲ: ಸತ್ಯಪಾಲ್ ಮಲಿಕ್ ಆರೋಪ

ಪ್ರಧಾನ ಮಂತ್ರಿಯ ಸ್ನೇಹಿತ ಅದಾನಿಯಿಂದಾಗಿ ಎಂಎಸ್ ಪಿ ಜಾರಿಗೆ ಬಂದಿಲ್ಲ: ಸತ್ಯಪಾಲ್ ಮಲಿಕ್ ಆರೋಪ

ಶಿಲ್ಲಾಂಗ್: ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಜಾರಿಗೆ ತರದಿರುವುದಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಪ್ರಧಾನಿ ಮೋದಿ ಅವರ ಉದ್ಯಮಿ ಸ್ನೇಹಿತ ಗೌತಮ್ ಅದಾನಿ ಅವರ ಕಾರಣದಿಂದಾಗಿಯೇ ರೈತರ ಅನುಕೂಲಕ್ಕಾಗಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಹರಿಯಾಣದ ನುಹ್ನ ಕಿರಾ ಗ್ರಾಮದ ಗೋಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸತ್ಯಪಾಲ್ ಮಲಿಕ್ ಅವರು ದೇಶದ ರೈತರನ್ನು ಸೋಲಿಸಲು ಸಾಧ್ಯವಿಲ್ಲ ಮತ್ತು ಅವರ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಎಂಎಸ್ ಪಿ ಯನ್ನು ಜಾರಿಗೆ ತರದಿದ್ದರೆ ಮತ್ತು ಅದಕ್ಕೆ ಕಾನೂನು ಖಾತರಿ ನೀಡದಿದ್ದರೆ, ಮತ್ತೊಂದು ಹೋರಾಟ ನಡೆಯಲಿದೆ ಮತ್ತು ಈ ಬಾರಿ ಅದು ಉಗ್ರ ಹೋರಾಟವಾಗಲಿದೆ. ನೀವು ಈ ದೇಶದ ರೈತನನ್ನು ಸೋಲಿಸಲು ಸಾಧ್ಯವಿಲ್ಲ. ನೀವು ಅವನನ್ನು ಹೆದರಿಸಲು ಸಾಧ್ಯವಿಲ್ಲ. ನೀವು ಇಡಿ ಅಥವಾ ಆದಾಯ ತೆರಿಗೆ ಅಧಿಕಾರಿಗಳನ್ನು ಕಳುಹಿಸಲು ಸಾಧ್ಯವಿಲ್ಲದ ಕಾರಣ, ನೀವು ರೈತರನ್ನು ಹೇಗೆ ಹೆದರಿಸುತ್ತೀರಿ?” ಎಂದು ಹೇಳಿದ್ದಾರೆ.

Join Whatsapp
Exit mobile version