Home ಟಾಪ್ ಸುದ್ದಿಗಳು ಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒಗೆ ಗೇಟ್​ಪಾಸ್​ ನೀಡಿದ ಮುರುಘಾ ಶ್ರೀ

ಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒಗೆ ಗೇಟ್​ಪಾಸ್​ ನೀಡಿದ ಮುರುಘಾ ಶ್ರೀ

ಚಿತ್ರದುರ್ಗ: ಮುರುಘಾಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒ ಆಗಿದ್ದ ಎಂ.ಭರತ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣ ಆದೇಶಿಸಿದ್ದಾರೆ. ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ತೃಷೆಗೆ ಬಳಸುತ್ತಿದ್ದ ಗಂಭೀರ ಆರೋಪದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಎಲ್ಲ ಅಧಿಕಾರ ಮರುವಶಪಡಿಕೊಂಡ ಬೆನ್ನಿಗೇ ಮುರುಘಾಶ್ರೀ, ಸಿಇಒ ಆಗಿದ್ದ ಎಂ.ಭರತ್ ಕುಮಾರ್‌ಗೆ ಗೇಟ್‌ಪಾಸ್ ನೀಡಿದ್ದಾರೆ.

ಜೈಲಿನಿಂದ ಬಿಡುಗಡೆ ಆಗಿದ್ದ ಮುರುಘಾ ಶ್ರೀಗಳು ನಿನ್ನೆ, ಮಠದ ಆಡಳಿತಾಧಿಕಾರ ಸ್ವೀಕರಿಸಿದ್ದರು. ಮುರಘಾಶ್ರೀ ಜೈಲಲ್ಲಿರುವಾಗ ಅವರನ್ನು ಹೊರಗಿಟ್ಟು ಭರತ್ ಕುಮಾರ್ ಹೊಸ ಸಮಿತಿ‌ ರಚಿಸಿದ್ದರು. ಇದೀಗ ಆಡಳಿತಾಧಿಕಾರ ಸ್ವೀಕರಿಸಿದ ಕೂಡಲೇ ಭರತ್ ರನ್ನು ಹುದ್ದೆಯಿಂದ ತೆಗೆದು ಹಾಕಿದ್ದಾರೆ.

Join Whatsapp
Exit mobile version