ಸ್ಪೀಕರ್ ಕುರಿತು ಸಂಸದರು ಟ್ವಿಟ್ಟರ್ ನಲ್ಲಿ ಏನೂ ಬರೆಯುವಂತಿಲ್ಲ: ಓಂ ಬಿರ್ಲಾ ಎಚ್ಚರಿಕೆ

Prasthutha|

ನವದೆಹಲಿ: ತಮ್ಮ ವಿರುದ್ಧ ಟ್ವಿಟ್ಟರ್ ನಲ್ಲಿ ಏನೂ ಬರೆಯದಂತೆ ಸಂಸದರಿಗೆ ಎಚ್ಚರಿಕೆ ನೀಡಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

ಕಲಾಪದ ಸಂದರ್ಭದಲ್ಲಿ ಬಿರ್ಲಾ ಯಾವುದೇ ಸದಸ್ಯರ ಹೆಸರನ್ನು ಪ್ರಸ್ತಾಪಿಸದಿದ್ದರೂ, ಶೂನ್ಯ ವೇಳೆಯಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೊಯಿತ್ರಾ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ ಲೋಕಸಭೆಯಲ್ಲಿ ಓಂ ಬಿರ್ಲಾ ಅವರ ಈ ಹೇಳಿಕೆ ಬಂದಿದೆ.

” ಕೆಲವೊಮ್ಮೆ ಸ್ಪೀಕರ್ ಸದಸ್ಯರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಕೆಲವು ಸದಸ್ಯರು ಟ್ವಿಟರ್ ನಲ್ಲಿ ಬರೆಯುತ್ತಿದ್ದಾರೆ. ಸ್ಪೀಕರ್ ಬಗ್ಗೆ ಸದಸ್ಯರು ಟ್ವಿಟ್ಟರ್ ನಲ್ಲಿ ಬರೆಯಬಾರದು ಎಂಬುದನ್ನು ದಯವಿಟ್ಟು ನೆನಪಿನಲ್ಲಿಡುವುದು  ಒಳ್ಳೆಯದು” ಎಂದು ಅವರು ಹೇಳಿದ್ದಾರೆ.

- Advertisement -

ಹಿರಿಯ ನಾಗರಿಕರು ಪ್ರಯಾಣ ಬೆಳೆಸುವಾಗ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮೊಯಿತ್ರಾ ಪ್ರಸ್ತಾಪಿಸಿದ್ದರು.

Join Whatsapp