ಮಧ್ಯಪ್ರದೇಶ: ಬುಡಕಟ್ಟು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಾಲಕಿಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈರಲ್ ಆದ ವೀಡಿಯೋದ ಆಧಾರದಲ್ಲಿ ಬುಡಕಟ್ಟು ಸಮುದಾಯದ ಮೂವರನ್ನು ಐಪಿಸಿ ಸೆಕ್ಷನ್ 354 ಎ, 34 ಎ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಲಿರಾಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಈ ಮಧ್ಯೆ ವೀಡಿಯೋ ಚಿತ್ರೀಕರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಕ್ಕಾಗಿ ಪ್ರತ್ಯೇಕ
ಇನ್ನಿಬ್ಬರನ್ನು ಕೂಡ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬುಡಕಟ್ಟು ಬಾಲಕಿಯರಿಗೆ ಮೇಲೆ ಅಮಾನುಷವಾಗಿ ಲೈಂಗಿಕ ದೌರ್ಜನ್ಯವೆಸಗಿದ ಕೇಸರಿ ಶಾಲು ಧರಿಸಿದ ಯುವಕರ ನಡೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಮಧ್ಯಪ್ರದೇಶದ ಅಲಿರಾಜ್’ಪುರ ಜಿಲ್ಲೆಯಲ್ಲಿ ನಡೆದ ಉತ್ಸವವೊಂದರಲ್ಲಿ ಕೇಸರಿ ಶಾಲು ಧರಿಸಿದ ಪುರುಷರ ಗುಂಪೊಂದು ಬುಡಕಟ್ಟು ಬಾಲಕಿಯರಿಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪಶ್ಚಿಮ ಮಧ್ಯ ಪ್ರದೇಶದ ಬುಡುಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ಹೋಳಿಯೊಂದಿಗೆ ಒಂದು ವಾರದ ಕಾಲ ನಡೆಯುವ ಉತ್ಸವವಾದ ಭಾಗೋರಿಯಾವನ್ನು ಆಚರಿಸುತ್ತಿರುವಾಗ ಮಾರ್ಚ್ 11 ರಂದು ಘಟನೆ ನಡೆದಿದೆ ಎಂದು ಹೇಳಲಾಗಿದೆ.