ಭೋಪಾಲ್: ಮಧ್ಯಪ್ರದೇಶದಲ್ಲಿ ಹಿಂದೂ ಬಹುಸಂಖ್ಯಾತ ಪ್ರದೇಶದಿಂದ ಮುಸ್ಲಿಮರಿಗೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಮಸೀದಿಗಳನ್ನು ಪ್ರಾರ್ಥನೆಗಳನ್ನು ಮತ್ತು ಬ್ಯಾಂಕುಗಳಲ್ಲಿ ಸೇವೆಗಳನ್ನು ನಿರಾಕರಿಸುವ ಮೂಲಕ ಮುಸ್ಲಿಂ ಕುಟುಂಬಗಳನ್ನು ಸಾಮಾಜಿಕ ಬಹಿಷ್ಕಾರ ಮಾಡಿ ಗ್ರಾಮದಿಂದ ಹೊರ ಹಾಕಲಾಗಿದೆ ಎಂದು ವರದಿಯಾಗಿದೆ. ಹಿಂದೂ ಪಾಟಿದಾರ್ ಸಮುದಾಯದ ಪ್ರಾಬಲ್ಯವಿರುವ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಬೊರ್ಲೆ ಗ್ರಾಮದಿಂದ ಮುಸ್ಲಿಮರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಹನ್ನೆರಡಕ್ಕಿಂತಲೂ ಹೆಚ್ಚು ಮುಸ್ಲಿಮ್ ಕುಟುಂಬವು ಸಂಘಪರಿವಾರದ ನೇತೃತ್ವದ ಹಿಂದುತ್ವವಾದಿಗಳ ಆಕ್ರಮಣಕ್ಕೆ ಹೆದರಿ ತಮ್ಮ ಗ್ರಾಮವನ್ನು ತೊರೆದಿದೆ. ವರದಿಯ ಪ್ರಕಾರ, ಗ್ರಾಮದಲ್ಲಿರುವ ಮುಸ್ಲಿಮರ ಮನೆಗಳ ಮೇಲೆ ಹಲವು ಬಾರಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಏಪ್ರಿಲ್ 18, 2021 ರಂದು, 21 ವರ್ಷದ ಅಮೀನ್ ಖಾನ್ ಬೋರ್ಲೆ ಗ್ರಾಮದ ಪಾಟಿದಾರ್ ಸಮುದಾಯದ ಅಪ್ರಾಪ್ತ ಬಾಲಕಿಯೊಂದಿಗೆ ಓಡಿ ಹೋಗಿದ್ದ. ನಂತರ ಅಮೀನ್ ಖಾನ್ ಮತ್ತು ಆತನಿಗೆ ಸಹಾಯ ಮಾಡಿದ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು. ಆದರೆ ಇದರ ನಂತರ, ಇಡೀ ಗ್ರಾಮದ ಮುಸ್ಲಿಮರ ವಿರುದ್ಧ ಆಕ್ರಮಣ ನಡೆಸಲಾಯಿತು ಎಂದು ತಿಳಿದುಬಂದಿದೆ.