Home ಟಾಪ್ ಸುದ್ದಿಗಳು ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಶಂಕೆ: ಪತಿ ನಾಪತ್ತೆ

ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಶಂಕೆ: ಪತಿ ನಾಪತ್ತೆ

ಚಿಕ್ಕಬಳ್ಳಾಪುರ: ಮೂರು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದು ತಾಯಿಯೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕಾಸ್ಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ನಡೆದಿದೆ.


ಸುಧಾರಾಣಿ (32) ಮಗಳು ಸಾನ್ವಿಯ (3) ಮೃತರು.


ಸುಧಾರಾಣಿ ಹಾಗೂ ರವಿ ದಂಪತಿ ಆಗಾಗ ಕೌಟುಂಬಿಕ ವಿಚಾರವಾಗಿ ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಗಂಡನ ಮೇಲಿನ ಕೋಪಕ್ಕೆ ಮಗುವನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Join Whatsapp
Exit mobile version