Home ಟಾಪ್ ಸುದ್ದಿಗಳು ವಿಷಾಹಾರ ಸೇವಿಸಿ ತಾಯಿ-ಮಗ ಸಾವು

ವಿಷಾಹಾರ ಸೇವಿಸಿ ತಾಯಿ-ಮಗ ಸಾವು

ಬೆಳಗಾವಿ: ವಿಷಾಹಾರ ಸೇವಿಸಿ ತಾಯಿ ಮಗ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಹುದಲಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಹುದಲಿ ಗ್ರಾಮದ ಪಾರ್ವತಿ ಮಳಗಲಿ (53), ಸೋಮನಿಂಗಪ್ಪ ಮಳಗಲಿ(28) ಮೃತಪಟ್ಟವರು.


ಕಳೆದ ಅ.3ರಂದು ಹೊಲದ ಕೆಲಸಕ್ಕೆಂದು ತೆರಳಿ ಸಂಜೆ ಮನೆಗೆ ಬಂದಿದ್ದ ತಾಯಿ ಮಗ ಇಬ್ಬರು ಬಜ್ಜಿ ಸೇವಿಸಿ ಬಳಿಕ ಅಸ್ವಸ್ಥರಾಗಿ ವಾಂತಿ ಮಾಡಿಕೊಂಡು ಅಸ್ವಸ್ಥರಾದರು. ತಕ್ಷಣವೇ ಅವರಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಮೃತಪಟ್ಟಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಮಾರಿಹಾಳ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

Join Whatsapp
Exit mobile version