Home ಟಾಪ್ ಸುದ್ದಿಗಳು ಊಟದ ವಿಚಾರಕ್ಕೆ ಜಗಳ: ತಾಯಿ, ಮಗ ಆತ್ಮಹತ್ಯೆ

ಊಟದ ವಿಚಾರಕ್ಕೆ ಜಗಳ: ತಾಯಿ, ಮಗ ಆತ್ಮಹತ್ಯೆ

ರಾಮನಗರ: ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಕುಮಾರಸ್ವಾಮಿ ಲೇಜೌಟ್ ನಲ್ಲಿ ನಡೆದಿದೆ.


ವಿಜಯಲಕ್ಷ್ಮಿ(50) ಮತ್ತು ಹರ್ಷ(25) ಮೃತಪಟ್ಟವರು ಎಂದು ಗುರುತಿಸಲಾಗಿದೆ.


ತಾಯಿ ವಿಜಯಲಕ್ಷ್ಮಿ ಜೊತೆ ರಾತ್ರಿ ಊಟದ ವಿಚಾರವಾಗಿ ಮಗ ಹರ್ಷ ಜಗಳವಾಡಿದ್ದ. ಈ ಕಾರಣಕ್ಕೆ ಮನನೊಂದ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇದರಿಂದ ಮನನೊಂದ ಹರ್ಷ, ನಾನೇ ತಾಯಿ ಸಾವಿಗೆ ಕಾರಣನಾದೆ ಎಂದು ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version