Home ಟಾಪ್ ಸುದ್ದಿಗಳು ರಸ್ತೆ ಬದಿ ಹಸುಗೂಸನ್ನು ಬಿಟ್ಟು ಹೋದ ತಾಯಿ

ರಸ್ತೆ ಬದಿ ಹಸುಗೂಸನ್ನು ಬಿಟ್ಟು ಹೋದ ತಾಯಿ

ಬೆಂಗಳೂರು: ಎರಡು ದಿನಗಳ ಹಿಂದೆ ಜನಿಸಿದ್ದ ಹೆಣ್ಣು ಹಸುಗೂಸನ್ನು ಬಿಟ್ಟು ಹೋಗಿರುವ ಘಟನೆ ಬ್ಯಾಡರಹಳ್ಳಿ ಬಳಿಯಲ್ಲಿ ನಡೆದಿದೆ.
ಬ್ಯಾಡರಹಳ್ಳಿಯ ಕಾಲೇಜೊಂದರ ಮುಂಭಾಗದಲ್ಲಿ ನಿನ್ನೆ ಮಧ್ಯರಾತ್ರಿ ಹಸುಗೂಸನ್ನು ಬಿಟ್ಟು ಹೋಗಿದ್ದು ಮಗುವಿನ ಅಳುವಿನ ಶಬ್ದ ಕೇಳಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಣ್ಣು ಮಗು ಎನ್ನುವ ಕಾರಣಕ್ಕೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪೋಷಕರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

Join Whatsapp
Exit mobile version