ಮದ್ದೂರು: ತಾಯಿಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪಟ್ಟಣದ ಹೊಳೆಬೀದಿಯಲ್ಲಿ ನಡೆದಿದೆ.
ಉಸ್ನಾ ಕೌಸರ್ (30), ಪುತ್ರ ಹಾರಿಸ್ (7) ಆಲಿಸಾ (4) ಹಾಗೂ ಅನಮ್ ಪಾತಿಮಾ (2) ಮೃತ ಪಟ್ಟವರು.
ಉಸ್ನಾಕೌಸರ್ ಪಟ್ಟಣದ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಕೆಲಸ ಮಾಡುತ್ತಿದ್ದು, ಗಂಡ ಅಖಿಲ್ ಚನ್ನಪಟ್ಟಣದಲ್ಲಿ ಮೆಕಾನಿಕಲ್ ಕೆಲಸ ನಿರ್ವಹಿಸುತ್ತಿದ್ದಾರೆ.
ಘಟನೆಗೆ ನಿಖರವಾದ ಕಾರಣ ಏನೆಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದ್ದು, ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.