ಉಡುಪಿ : ತಾಯಿಯೊಬ್ಬಳು ಮೂರು ಮಕ್ಕಳಿಗೆ ಜನ್ಮ ನೀಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ 27 ವರ್ಷದ ಮಹಿಳೆ ಸುನೀತಾ ಎಂಬವರು ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಉಡುಪಿಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಯಿತು. ತಾಯಿ ಹಾಗೂ ಮೂವರು ಕಂದಮ್ಮಗಳು ಆರೋಗ್ಯವಾಗಿವೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಮಹಿಳಾ ಹಾಗೂ ಮಕ್ಕಳ ಆಸ್ಪತ್ರೆಯ ಡಾ. ಕವಿಶಾ ಭಟ್, ಡಾ.ಸೂರ್ತನಾರಾಯಣ್, ಡಾ.ರಜನಿ ಕಾರಂತ್, ಡಾ.ಗಣಪತಿ ಹೆಗಡೆ ಹಾಗೂ ಡಾ. ಮಹದೇವ್ ಭಟ್ ನೇತೃತ್ವದ ವೈದ್ಯರ ತಂಡ ಅತ್ಯಂತ ಯಶಸ್ವಿಯಾಗಿ ಮೂವರು ಮಕ್ಕಳ ಹೆರಿಗೆ ಮಾಡಿಸಿದ್ದಾರೆ.