Home ಟಾಪ್ ಸುದ್ದಿಗಳು ಮಸೀದಿ ಮೈಕ್ ನೀವು ತೆಗೆಯುತ್ತೀರೋ ಅಥವಾ ನಾವು ತೆಗೆಯಬೇಕೋ: ವಿವಾದಾತ್ಮಕ ಹೇಳಿಕೆ ನೀಡಿದ ಮುತಾಲಿಕ್

ಮಸೀದಿ ಮೈಕ್ ನೀವು ತೆಗೆಯುತ್ತೀರೋ ಅಥವಾ ನಾವು ತೆಗೆಯಬೇಕೋ: ವಿವಾದಾತ್ಮಕ ಹೇಳಿಕೆ ನೀಡಿದ ಮುತಾಲಿಕ್

ಹುಬ್ಬಳ್ಳಿ: ಮಸೀದಿಯಲ್ಲಿ ಶಬ್ದ ಮಾಲಿನ್ಯವಾಗುತ್ತಿದ್ದು, ಮೈಕ್ ನೀವು ತೆಗೆಯುತ್ತೀರೋ ಅಥವಾ ನಾವು ತೆಗೆಯಬೇಕೋ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಬ್ದ ಮಾಲಿನ್ಯ ನಿಲ್ಲಿಸುವಂತೆ ಸುಪ್ರೀಂ‌ಕೋರ್ಟ್ ಆದೇಶ ಹೊರಡಿಸಿ ಈಗಾಗಲೇ 21 ವರ್ಷ ಕಳೆದಿದ್ದು. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೂ ಶಬ್ದ ಮಾಲಿನ್ಯ ಆಗಬಾರದು ಎಂಬ ಆದೇಶವಿದೆ. ಜನಪ್ರತಿನಿಧಿಗಳು ಹಾಗೂ ಪೊಲೀಸರ ನಿರ್ಲಕ್ಷ್ಯದಿಂದಾಗಿ ಶಬ್ದಮಾಲಿನ್ಯ ಹೆಚ್ಚಾಗುತ್ತಿದೆ ಎಂದಿದ್ದಾರೆ.


ಅ. 7 ರಿಂದ ಮಸೀದಿ ಮೈಕ್ ತೆರವಿಗೆ ಆಂದೋಲನ ನಡೆಸಲಿದ್ದೇವೆ. ಶೀಘ್ರವೇ ಈ ಶಬ್ದ ಮಾಲಿನ್ಯ ತಡೆಯದಿದ್ದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಲಿದೆ. ಮುಂದಿನ ದಿನಗಳಲ್ಲಿ ಮಸೀದಿ ಮುಂದೆಯೇ ನಾವು ಉಗ್ರ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

Join Whatsapp
Exit mobile version