Home ಟಾಪ್ ಸುದ್ದಿಗಳು ತೈಲ ಟ್ಯಾಂಕರ್ ಸ್ಫೋಟ: 92ಕ್ಕೂ ಅಧಿಕ ಮಂದಿ ಸಾವು, ನೂರಾರು ಮಂದಿಗೆ ಗಾಯ

ತೈಲ ಟ್ಯಾಂಕರ್ ಸ್ಫೋಟ: 92ಕ್ಕೂ ಅಧಿಕ ಮಂದಿ ಸಾವು, ನೂರಾರು ಮಂದಿಗೆ ಗಾಯ

ಫ್ರೀಟೌನ್, ಸಿಯೆರಾ ಲಿಯೋನ್: ಸಿಯೆರಾ ಲಿಯೋನ್‌ ನ ರಾಜಧಾನಿ ಬಳಿ ತೈಲ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 92 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.


ಸೋರಿಕೆಯಾದ ಇಂಧನವನ್ನು ಸಂಗ್ರಹಿಸಲು ಜಮಾಯಿಸಿದ ಜನರೇ ಹೆಚ್ಚಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಫ್ರೀಟೌನ್‌ನ ಪೂರ್ವದ ಉಪನಗರ ವೆಲ್ಲಿಂಗ್‌ ಟನ್‌ ನಲ್ಲಿ ಟ್ಯಾಂಕರ್‌ಗೆ ಬಸ್ ಡಿಕ್ಕಿಯಾದ ನಂತರ ಶುಕ್ರವಾರ ತಡರಾತ್ರಿ ಸ್ಫೋಟ ಸಂಭವಿಸಿದೆ. ಕನ್ನಾಟ್ ಆಸ್ಪತ್ರೆಯ ಶವಾಗಾರಕ್ಕೆ ಶನಿವಾರ ಬೆಳಿಗ್ಗೆ 92 ಶವಗಳನ್ನು ತರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಸುಮಾರು 30ಕ್ಕೂ ಅಧಿಕ ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ತರಲಾಗಿದೆ. ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಆಸ್ಪತ್ರೆಯ ಸಿಬ್ಬಂದಿ ಫೊಡೆ ಮೂಸಾ ತಿಳಿಸಿದ್ದಾರೆ.
ನೂರಾರು ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆಕಾಶದಲ್ಲಿ ಬೃಹತ್ ಪ್ರಮಾಣದ ಬೆಂಕಿಯ ಉಂಡೆಗಳು ಕಾಣಿಸಿದವು ಎಂದು ಮಾಧ್ಯಮಗಳು ವರದಿ ಮಾಡಿವೆ.

Join Whatsapp
Exit mobile version