Home ಟಾಪ್ ಸುದ್ದಿಗಳು ದೇಶಾದ್ಯಂತ ಪಿಎಫ್ಐ ನಾಯಕರ ಮನೆ ಮೇಲೆ ಮುಂದುವರಿದ ದಾಳಿ: 200ಕ್ಕೂ ಅಧಿಕ ಮಂದಿ ವಶಕ್ಕೆ

ದೇಶಾದ್ಯಂತ ಪಿಎಫ್ಐ ನಾಯಕರ ಮನೆ ಮೇಲೆ ಮುಂದುವರಿದ ದಾಳಿ: 200ಕ್ಕೂ ಅಧಿಕ ಮಂದಿ ವಶಕ್ಕೆ

ನವದೆಹಲಿ: ಪಿಎಫ್ ಐ ಕಚೇರಿ, ನಾಯಕರ ಮನೆ ಮೇಲೆ ಸೆ.22ರಂದು ಎನ್ ಐಎ ದಾಳಿ ನಡೆಸಿ ನೂರಕ್ಕೂ ಅಧಿಕ ಮುಖಂಡರನ್ನು ಬಂಧಿಸಿದ ಬೆನ್ನಲ್ಲೇ ಮತ್ತೆ ಮಂಗಳವಾರ ಬೆಳಗ್ಗಿನ ಜಾವ ದೇಶಾದ್ಯಂತ ಪಿಎಫ್ ಐ ಮುಖಂಡರ ಮನೆ ಮೇಲೆ ದಾಳಿ ನಡೆಸಿ 200ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಪಿಎಫ್ ಐ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಎಸ್ ಡಿಪಿಐ ಮುಖಂಡರು ಕೂಡ ಸೇರಿದ್ದಾರೆ.

ರಾಜ್ಯದ 15 ಜಿಲ್ಲೆಗಳಲ್ಲಿ ದಾಳಿ ನಡೆಸಿದ ಪೊಲೀಸರು ಒಟ್ಟಾರೆ 70ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ರಾತ್ರೋ ರಾತ್ರಿ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

NIA ದಾಳಿ ಮತ್ತು ಪಿಎಫ್ ಐ ನಾಯಕರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ ಎಸ್ ಡಿಪಿಐ, ಪಿಎಫ್ ಐ  ನಾಯಕರ ಮನೆ ಮೇಲೆ ಮಂಗಳವಾರ ಬೆಳಗ್ಗಿನ ಜಾವ ಪೊಲೀಸರು ದಾಳಿ ನಡೆಸಿ ಹಲವು ಮುಖಂಡರನ್ನು ಬಂಧಿಸಿದ್ದಾರೆ.

 ಬಂಧಿತ ಪಿಎಫ್ಐ ನಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು.

ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಇದ್ದವರನ್ನು ಗುರುತಿಸಿ ಅವರ ಮೇಲೆ 107 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಉಳ್ಳಾಲ, ಪಾಂಡೇಶ್ವರ, ಕುದ್ರೋಳಿ ಸೇರಿ ಹಲವೆಡೆ ಪೊಲೀಸರು ಬೆಳಗ್ಗಿನ ಜಾವ 4.30ರ ಸುಮಾರಿಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಪೊಲೀಸರ ಕ್ರಮ ಅತಿರೇಕದ್ದು ಮತ್ತು ಕಾನೂನು ಬಾಹಿರ ಎಂದು ಪಿಎಫ್ ಐ ನಾಯಕರು ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version