Home ಟಾಪ್ ಸುದ್ದಿಗಳು ರೈಲ್ವೆ ಕಂಬಿ ದಾಟಿದ 20ಕ್ಕೂ ಹೆಚ್ಚು ಕಾಡಾನೆ ಹಿಂಡು: ಸ್ಥಳೀಯರಲ್ಲಿ ಆತಂಕ

ರೈಲ್ವೆ ಕಂಬಿ ದಾಟಿದ 20ಕ್ಕೂ ಹೆಚ್ಚು ಕಾಡಾನೆ ಹಿಂಡು: ಸ್ಥಳೀಯರಲ್ಲಿ ಆತಂಕ

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಕಾಡಾನೆ ಹಿಂಡು ರೈಲ್ವೆ ಹಳಿ ದಾಟಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.


ಸಕಲೇಶಪುರ ತಾಲೂಕಿನ ಹಸಿಡೆ ಗ್ರಾಮದ ಸಮೀಪ ಆನೆಗಳು ರೈಲ್ವೇ ಹಳಿ ದಾಟಿದ್ದು, ಹಲಸುಲಿಗೆ ಗ್ರಾಮದ ಕಡೆಯಿಂದ ಒಸ್ಸೂರ್ ಎಸ್ಟೇಟ್ ಕಡೆಗೆ ಕಾಡಾನೆ ಹಿಂಡು ಬಂದಿದೆ ಎಂದು ತಿಳಿದುಬಂದಿದೆ.


ಕಾಡಾನೆ ಹಿಂಡು ಕಂಡು ಸ್ಥಳೀಯರು ವಿಡಿಯೋ ಮಾಡಿದ್ದು, ರೈಲ್ವೇ ಹಳಿಯ ಸಮೀಪ ಮುನ್ನೆಚ್ಚರಿಕೆ ವಹಿಸಲು ಅರಣ್ಯ ಇಲಾಖೆ ಸ್ಥಳೀಯರಿಗೆ ಮನವಿ ಮಾಡಿದೆ.
ರೈಲ್ವೆ ಟ್ರ್ಯಾಕ್ 35/450, ಎಲ್ ಸಿ 39 ರ ಬಳಿ ಗಜಪಡೆ ಹಾದುಹೋಗಿವೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ರೈಲಿಗೆ ಡಿಕ್ಕಿಯಾಗಿ ಮೂರು ಕಾಡಾನೆಗಳು ಪ್ರಾಣ ಕಳೆದುಕೊಂಡಿವೆ. ಹೆಚ್ಚಿನ ಆರ್ ಆರ್ ಟಿ ಸಿಬ್ಬಂದಿ ನೇಮಕ ಮಾಡುವಂತೆ ಒತ್ತಾಯ ಕೇಳಿ ಬಂದಿದೆ. ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

Join Whatsapp
Exit mobile version