Home ಟಾಪ್ ಸುದ್ದಿಗಳು ಮೊರ್ಬಿ ಸೇತುವೆ ದುರಂತ: ತನಿಖೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಪ್ರಧಾನಿಗೆ ಖರ್ಗೆ ಒತ್ತಾಯ

ಮೊರ್ಬಿ ಸೇತುವೆ ದುರಂತ: ತನಿಖೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಪ್ರಧಾನಿಗೆ ಖರ್ಗೆ ಒತ್ತಾಯ

ನವದೆಹಲಿ: ಇತ್ತೀಚೆಗೆ ಮೊರ್ಬಿ ಸೇತುವೆ ದುರಂತದಲ್ಲಿ 135 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ‘ನಿಷ್ಕ್ರಿಯ ತನಿಖಾ ಪ್ರಕ್ರಿಯೆ’ಯ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಗುತ್ತಿಗೆದಾರರು ಮತ್ತು ಪುರಸಭೆ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸೇತುವೆಯ ತುಕ್ಕು ಹಿಡಿದ ಕೇಬಲ್ ಅನ್ನು ದುರಸ್ತಿಗೊಳಿಸಲಾಗಿಲ್ಲ. ಫಿಟ್ನೆಸ್ ಪ್ರಮಾಣಪತ್ರ ಮತ್ತು ಅಧಿಕೃತ ಒಪ್ಪಿಗೆಯಿಲ್ಲದೆ ಅಕ್ಟೋಬರ್ 26 ರಂದು ಸೇತುವೆ ತೆರೆಯಲಾಗಿತ್ತು. ಗುತ್ತಿಗೆದಾರನು ದುರಸ್ತಿಗೊಳಿಸಲು ಅರ್ಹನಾಗಿರಲಿಲ್ಲ. ದುರಂತ ಸಂಭವಿಸುವ ಒಂದು ದಿನ ಮುಂಚಿತವಾಗಿ ಸೇತುವೆ ತೆರೆದಿದೆ ಎಂದು ಪುರಸಭೆ ಮುಖ್ಯಾಧಿಕಾರಿಗೆ ತಿಳಿದಿತ್ತು ಎಂದು ಆರೋಪಿಸಿದರು.

Join Whatsapp
Exit mobile version