Home ಟಾಪ್ ಸುದ್ದಿಗಳು ಚಂದ್ರನೆಡೆಗೆ ಹೋಗಬೇಕೇ? ಮಾರ್ಚ್ 14ರ ಮುಂಚೆ ಅರ್ಜಿ ಹಾಕಿ?!

ಚಂದ್ರನೆಡೆಗೆ ಹೋಗಬೇಕೇ? ಮಾರ್ಚ್ 14ರ ಮುಂಚೆ ಅರ್ಜಿ ಹಾಕಿ?!

ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ 2023 ರಲ್ಲಿ ಚಂದ್ರಯಾನ ಹೊರಡಲು ತೀರ್ಮಾನಿಸಿದ್ದು ತನ್ನ ಜೊತೆ ಎಂಟು ಮಂದಿಯನ್ನು ಕರೆದೊಯ್ಯುವುದಾಗಿ ಮಂಗಳವಾರ ಬಿಡುಗಡೆಗೊಳಿಸಿದ ವೀಡಿಯೋ ಒಂದರಲ್ಲಿ ತಿಳಿಸಿದ್ದಾರೆ.

2018 ರಲ್ಲಿ ಸ್ಪೇಸ್ ಎಕ್ಸ್ ಸಂಸ್ಥೆಯು ,2023ರ ವೇಳೆಗೆ ಸಾರ್ವಜನಿಕರನ್ನು ಚಂದ್ರನೆಡೆಗೆ ಕರೆದುಕೊಂಡು ಹೋಗುವುದಾಗಿ ಘೋಷಿಸಿತ್ತು. ಆವಾಗಲೇ ಯುಸಾಕು ಮೇಜಾವಾ ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ ಅವರೊಂದಿಗೆ ತನ್ನ ಸೀಟನ್ನು ಕಾಯ್ದಿರಿಸಿಕೊಂಡಿದ್ದರು ಮತ್ತು ಅದರೊಂದಿಗೆ ಇನ್ನೂ 8 ಸೀಟುಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದರು. ಮೊದಲು ಕಲಾವಿದರಿಗೆ ಆ ಅವಕಾಶ ನೀಡಲಾಗುವುದು ಎಂದು ಘೋಷಿಸಿದ್ದ ಯುಸಾಕು ಈಗ “ಸಕಾರಾತ್ಮಕ ಚಿಂತನೆ ನಡೆಸುವ ಪ್ರತಿಯೊಬ್ಬನೂ ಕಲಾವಿದನೇ “ ಎಂದು ಹೇಳಿ ಜನಸಾಮಾನ್ಯರು ಯಾರು ಬೇಕಾದರೂ ತನ್ನ ಜೊತೆ ಸೇರಿಕೊಳ್ಳಬಹುದು ಎಂದು ಆಹ್ವಾನಿಸಿದ್ದಾರೆ.

ಯಾವುದೇ ಎಂಟು ಮಂದಿಗೆ ಮಾರ್ಚ್ 14ರ ವರೆಗೆ ಆನ್ ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಆರಂಭಿಕ ಸ್ಕ್ರೀನಿಂಗ್ ಮಾರ್ಚ್ 21ರ ಒಳಗೆ ನಡೆಸಲಾಗುತ್ತದೆ. ಆ ಬಳಿಕ ಅಸೈನ್ ಮೆಂಟ್ ಹಾಗೂ ಅನ್ ಲೈನ್ ಸಂದರ್ಶನ ನಡೆಯಲಿದೆ. ಕೊನೆಯ ಹಂತವಾಗಿ 2021 ಮೇ ತಿಂಗಳ ಕೊನೆಯಲ್ಲಿ ವೈದ್ಯಕೀಯ ತಪಾಸಣೆಯ ಬಳಿಕ ಆ ಎಂಟು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿದೆ

Join Whatsapp
Exit mobile version