Home ಕರಾವಳಿ ಮೂಡುಬಿದ್ರೆ: ಟೋಪಿ ಧರಿಸಿದ್ದಕ್ಕೆ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಎಬಿವಿಪಿಯಿಂದ ಗಂಭೀರ ಹಲ್ಲೆ

ಮೂಡುಬಿದ್ರೆ: ಟೋಪಿ ಧರಿಸಿದ್ದಕ್ಕೆ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಎಬಿವಿಪಿಯಿಂದ ಗಂಭೀರ ಹಲ್ಲೆ

ಮೂಡುಬಿದ್ರೆ: ಕಾಲೇಜಿನಲ್ಲಿ ಏರ್ಪಡಿಸಿದ್ದ “ಟ್ರೆಡಿಶನಲ್ ಡೇ” ಕಾರ್ಯಕ್ರಮದಲ್ಲಿ ತಲೆಗೆ ಟೋಪಿ ಹಾಕಬಾರದು ಎಂದು ಬೆದರಿಸಿ ಎಬಿವಿಪಿಗೆ ಸೇರಿದ ಸುಮಾರು 40 ಮಂದಿಯ ತಂಡವೊಂದು ನಾಲ್ವರು ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಗಂಭೀರ ಹಲ್ಲೆ ನಡೆಸಿರುವ ಘಟನೆ ಗುರುವಾರ ಸಂಜೆ ನಡೆದಿದೆ.


ಯೆನಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. 3ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಶಾಝ್, ಮುವಾಝ್, ಸ್ವರೂಪ್ ಮತ್ತು ಯಶಾನ್ ಗಾಯಗೊಂಡು ಮೂಡುಬಿದ್ರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ನಿನ್ನೆ ಕಾಲೇಜಿನಲ್ಲಿ ಸಾಂಪ್ರದಾಯಿಕ ವಸ್ತ್ರಧಾರಣೆ ಕಾರ್ಯಕ್ರಮದ ಪೂರ್ವತಯಾರಿ ನಡೆಯುತ್ತಿತ್ತು.ಈ ವೇಳೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳೊಂದಿಗೆ ಟೋಪಿ ಧರಿಸುವ ವಿಷಯದಲ್ಲಿ ತಕರಾರು ತೆಗೆದು ಮಾತಿನ ಚಕಮಕಿ ನಡೆಸಿದ್ದಾರೆ. ಆಗ ಉಭಯ ಕಡೆಯವರ ನಡುವೆ ಹೊಯೈ ಕೈ ನಡೆದಿದೆ. ವಿಷಯ ಅರಿತ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಚೇಂಬರ್ ಗೆ ಕರೆಸಿ ತರಾಟೆಗೆ ತೆಗೆದುಕೊಂಡು, ಎರಡೂ ಕಡೆಯ ವಿದ್ಯಾರ್ಥಿಗಳ ಪೈಕಿ ತಲಾ ನಾಲ್ವರನ್ನು ಅಮಾನತುಗೊಳಿಸಿದ್ದರು.


ಇಂದು ಎಬಿವಿಪಿಗೆ ಸೇರಿದ ಸುಮಾರು 40 ವಿದ್ಯಾರ್ಥಿಗಳು ಅದೇ ವಿಷಯವನ್ನು ಮುಂದಿಟ್ಟುಕೊಂಡು ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಗಾಯಾಳು ವಿದ್ಯಾರ್ಥಿಗಳ ಹೇಳಿಕೆ ಪಡೆದಿದ್ದಾರೆ.

Join Whatsapp
Exit mobile version