ಅನಂತ್ ಕುಮಾರ್ ಹೆಗಡೆ ವಿರುದ್ಧ ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

Prasthutha|

ಮೂಡಬಿದ್ರೆ: ಸಂವಿಧಾನ ತಿದ್ದುಪಡಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

- Advertisement -

ಕಾಂಗ್ರೆಸ್ ಕಾರ್ಯಕರ್ತರು ಸಂಸದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಪಡಿಸಿದರು. ಬಳಿಕ ಸಂಸದರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೆಲೇರಿಯನ್ ಸಿಕ್ವೇರಾ, ಮೋಹನ್ ಕೋಟ್ಯಾನ್, ಮುಖಂಡರಾದ ರಾಜೇಶ್ ಕಡ್ಲಕೆರೆ, ಪುರಂದರ ದೇವಾಡಿಗ, ಜಯಕುಮಾರ್ ಶೆಟ್ಟಿ, ನಿತಿನ್ ಬೆಳುವಾಯಿ, ಸುರೇಶ್ ಬೋಳಾರ, ವಾಸುದೇವ ನಾಯಕ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಗಣೇಶ್ ಕೊಣಾಜೆ, ವಿವೇಕಾನಂದ ಶಿರ್ತಾಡಿ, ಶಿವಾನಂದ ಪಾಂಡ್ರು, ಸಂತೋಷ್ ಶೆಟ್ಟಿ ಕೊಡಂಗಲ್ಲು ಉಪಸ್ಥಿತರಿದ್ದರು.



Join Whatsapp