ಮಂಗಳೂರು: ಬಜಪೆ ರಸ್ತೆಯ ಚತುಷ್ಪಥ ರಸ್ತೆ ಕಾಮಗಾರಿಯಲ್ಲಿ ಕಳಪೆಯಾಗಿದೆ ಎಂದು ಹೋರಾಟ ನಡೆಸುತ್ತಿರುವ ಬಜಪೆ ನಾಗರಿಕ ಹಿತರಕ್ಷಣಾ ವೇದಿಕೆಗೆ ಎಸ್.ಡಿ.ಪಿ.ಐ ಬೆಂಬಲ ನೀಡುತ್ತದೆ ಎಂದು ಎಸ್.ಡಿ.ಪಿ.ಐ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಹೇಳಿದ್ದಾರೆ.
ಬಜಪೆಯಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆಯು ಸಂಪೂರ್ಣವಾಗಿ ಕಳಪೆಯಾಗಿದೆ ಹಾಗೂ ರಸ್ತೆಯ ಅಗಲೀಕರಣದಲ್ಲಿ ಚತುಷ್ಪಥ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಮಾರ್ಪಡಿಸುವುದರಲ್ಲಿ ಭಾರಿ ವ್ಯಕ್ತಿಗಳ ಲಾಬಿಗೆ ಮಣಿದು ಲೋಕಪಯೋಗಿ ಇಲಾಖೆಯ ಅಧಿಕಾರಿಗಳು ಈ ರೀತಿಯಾಗಿ ಮಾಡುತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.
ಇನ್ನು ಮೂಡಬಿದರೆ ಶಾಸಕ ಉಮಾನಾಥ್ ಕೋಟ್ಯಾನ್ ಇದರ ಬಗ್ಗೆ ಗಮನ ಹರಿಸದೆ ಇರುವುದು ಇನ್ನಷ್ಟು ಸಂಶಯಗಳಿಗೆ ಪುಷ್ಟಿ ನೀಡುತ್ತಿದೆ. ಶಾಸಕರಿಗೂ ಹಾಗೂ ಗುತ್ತಿಗೆದಾರರ ಮಧ್ಯೆ ಇರುವ ಸಂಬಂಧವಾದರೂ ಏನು ಎಂದು ಆಸಿಫ್ ಕೋಟೆಬಾಗಿಲು ಪ್ರಶ್ನಿಸಿದರು.