Home ಟಾಪ್ ಸುದ್ದಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಣಾ ಅಯ್ಯೂಬ್ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಿದ ಇಡಿ

ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಣಾ ಅಯ್ಯೂಬ್ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಿದ ಇಡಿ

ನವದೆಹಲಿ: ಕೆಟ್ಟೊ ಡಾಟ್ ಕಾಂ ವೆಬ್’ಸೈಟ್ ಮೂಲಕ ಸಹಾಯಹಸ್ತ ಮತ್ತು ಸೇವೆಯ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಾಸಿಕ್ಯೂಷನ್ ಜಾರ್ಟ್ ಶೀಟ್ ದಾಖಲಿಸಿದೆ.

ಜಾರಿ ನಿರ್ದೇಶನಾಲಯವು ಅಕ್ಟೋಬರ್ 13ರ ಗುರುವಾರ ಅಕ್ರಮ ಹಣ ವರ್ಗಾವಣೆ ಸಂಬಂಧ ನೋಟಿಸ್ ನೀಡಿದೆ.
ರಾಣಾ ಅಯೂಬ್, ಆನ್ ಲೈನ್ ನಿಧಿ ಸಂಗ್ರಹದ ಕೆಟ್ಟೋ ವೇದಿಕೆ ಮೂಲಕ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದಾರೆ ಎಂದು ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.
ಈ ವರ್ಷ ಫೆಬ್ರವರಿಯಲ್ಲಿ ಇಡಿ ಅಧಿಕಾರಿಗಳು, ರಾಣಾ ಅಯೂಬ್ ರ ರೂ. 1.77 ಕೋಟಿ ರೂಪಾಯಿಯ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಮಾರ್ಚ್ ನಲ್ಲಿ ಅಧಿಕಾರಿಗಳು, ಅವರು ವಿದೇಶಕ್ಕೆ ಹೋಗದಂತೆ ತಡೆ ವಿಧಿಸಿ ಹುಡುಕು ಸುತ್ತೋಲೆ ಹೊರಡಿಸಿತ್ತು.
“ಧರ್ಮ ಕಾರ್ಯದ ಹೆಸರಿನಲ್ಲಿ ಯೋಜಿಸಿ ಹಣ ಸಂಗ್ರಹಿಸಲಾಗಿದೆ” ಎಂದು ಜಾರಿ ನಿರ್ದೇಶನಾಲಯ ಆಪಾದಿಸಿದೆ. ಹಣವನ್ನು ಚಾರಿಟಿಗೆ ಅಲ್ಪಸ್ವಲ್ಪ ಬಳಸಿ ಹೆಚ್ಚಿನದನ್ನು ತನ್ನ ಹೆಸರಿನಲ್ಲಿ ಪ್ರತ್ಯೇಕ ಖಾತೆಯಲ್ಲಿ ಇಟ್ಟಿದ್ದರು ಎಂದೂ ಇಡಿ ಹೇಳಿದೆ.
ಕೆಟ್ಟೋ ಮೂಲಕ ಸಂಗ್ರಹಿಸಿದ ಹಣದಲ್ಲಿ ರೂ. 50 ಲಕ್ಷ ಫಿಕ್ಸೆಡ್ ಡಿಪಾಸಿಟ್ ಅವರದೇ ಹೆಸರಿನಲ್ಲಿ ಇಡಲಾಗಿದೆ. ಪಿಎಂ ಕೇರ್ಸ್ ಮತ್ತು ಸಿಎಂ ಕೇರ್ಸ್ ನಿಧಿಯಲ್ಲಿ ಆಕೆ ರೂ. 74.50 ಲಕ್ಷ ಡಿಪಾಜಿಟ್ ಮಾಡಿದ್ದಾಗಿ ಇಡಿ ಹೇಳಿದೆ.
50 ಲಕ್ಷ ಎಫ್ ಡಿ ಠೇವಣಿಯಿಂದ ರಾಣಾ ಅಯೂಬ್ ಅವರು ರೂ. 1,77,27,704 ಬಡ್ಡಿ ಸಂಪಾದಿಸಿದ್ದಾರೆ ಎಂದೂ ಆಪಾದಿಸಲಾಗಿದೆ.
ಇಡಿ ಮುಟ್ಟುಗೋಲು ಹಾಕಿಕೊಂಡ ಹಣವು ಬೇರೆ ಬೇರೆ ಬ್ಯಾಂಕುಗಳಲ್ಲಿ ಇರಿಸಿದ್ದಾಗಿದೆ.
ವಿಕಾಸ್ ಸಾಂಕೃತಾಯನ ಎಂಬವರ ದೂರಿನ ಮೇಲೆ 2021ರ ಸೆಪ್ಟೆಂಬರ್ ನಲ್ಲಿ ರಾಣಾ ವಿರುದ್ಧ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಇಂದಿರಾಪುರಂ ಪೋಲೀಸು ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಐಪಿಸಿ ಆದಾಯ ತೆರಿಗೆ ಕಾಯ್ದೆ, ಕಪ್ಪು ಹಣ ಕಾಯ್ದೆಯ 4ನೆ ವಿಧಿಯಂತೆ ಎಫ್ ಐಆರ್ ಹೂಡಲಾಗಿದೆ.
2020ರ ಏಪ್ರಿಲ್ ಮೇನಲ್ಲಿ ಕೊಳಚೆ ನಿವಾಸಿಗಳ ಅಭಿವೃದ್ಧಿ, ಜೂನ್ ಸೆಪ್ಟೆಂಬರ್ ನಲ್ಲಿ ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದ ರೈತರ ನಷ್ಟ ತುಂಬಲು 2021ರ ಮೇ ಝೂನ್ ನಲ್ಲಿ ಕೋವಿಡ್ ಬಾದಿತರಿಗೆ ನೆರವು ಹೆಸರಿನಲ್ಲಿ ಹಣ ಸಂಗ್ರಹಿಸಲಾಗಿದೆ.
“ರಾಣಾ ಅಯೂಬ್ ಅವರು ಕೆಟ್ಟೋ ಮೂಲಕ ರೂ. 2,69,44,680 ಸಂಗ್ರಹಿಸಿದ್ದಾರೆ. ಆಕೆಯ ಸಹೋದರಿ ತಂದೆ ಸಹ ಬ್ಯಾಂಕಿನಿಂದ ಇದರಲ್ಲಿ ಹಣ ಪಡೆದಿದ್ದಾರೆ. ರೂ. 72,01,786 ಬ್ಯಾಂಕಿನಿಂದ ರಾಣಾ ಹೆಸರಲ್ಲೇ ತೆಗೆಯಲಾಗಿದೆ. ತಂದೆ ಮುಹಮ್ಮದ್ ಅಯೂಬ್ ವಾಕಿಬ್ ಹೆಸರಿನಲ್ಲಿ ರೂ. 1,60,27,822 ಮತ್ತು ಸಹೋದರಿ ಇಫ್ಫತ್ ಶೇಖ್ ಹೆಸರಿನಲ್ಲಿ ರೂ. 72,01,786 ತೆಗೆಯಲಾಗಿದೆ. ಮುಂದೆ ಮೂರೂ ಖಾತೆಗಳನ್ನು ಆಕೆಯ ಒಂದೇ ಖಾತೆ ಮಾಡಲಾಗಿದೆ” ಎಂದು ತನಿಖೆಯಿಂದ ಗೊತ್ತಾದುದಾಗಿ ಇಡಿ ಆರೋಪ ಹೊರಿಸಿ ನೋಟಿಸ್ ನೀಡಿದೆ.

Join Whatsapp
Exit mobile version