ನಾವು ನಿರೀಕ್ಷೆ ಮಾಡಿದಷ್ಟು ದೇಶ ಅಭಿವೃದ್ಧಿ ಹೊಂದಿಲ್ಲ: ಮೋಹನ್ ಭಾಗವತ್

Prasthutha|

ನವದೆಹಲಿ: ನಾವು ನಿರೀಕ್ಷೆ ಮಾಡಿದಷ್ಟು ದೇಶ ಅಭಿವೃದ್ಧಿ ಹೊಂದಿಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

- Advertisement -


ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಳೆದ 75 ವರ್ಷಗಳಲ್ಲಿ ದೇಶವು ಎಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಿತ್ತೋ ಅಷ್ಟು ಆಗಿಲ್ಲ. ನಾವು ಶಕ್ತಿ, ಸಾಮರ್ಥ್ಯ ಹೊಂದಿದ್ದರೂ ಕೆಲಸಕ್ಕೂ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಹೇಳಿದ್ದಾರೆ. ನಾವು ಮುಂದೆ ಸಾಗಬೇಕಿದ್ದರೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಿದೆ. ಆದರೆ ನಾವು ಹಾಗೆ ಮಾಡಿರಲಿಲ್ಲ. ಆದ್ದರಿಂದ ಇನ್ನೂ ಮುಂದುವರಿಯುವುದು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.


ಎಲ್ಲರೂ ‘ ಜೈ ಶ್ರೀರಾಮ್ ‘ ಘೋಷಣೆ ಕೂಗುತ್ತಾರೆ. ಆದರೆ, ನಾವು ರಾಮನಂತೆ ಕಾರ್ಯನಿರ್ವಹಿಸಬೇಕಿದೆ. ನಮಗೆ ಭರತನಂತೆ ಪ್ರೀತಿಸುವ, ಕಾಳಜಿ ವಹಿಸುವ ಸಹೋದರ ಬೇಕು. ಆದರೆ ನಾವು ಅದೇ ಹಾದಿಯನ್ನು ಅನುಸರಿಸುವುದಿಲ್ಲ ಎಂದು ಭಾಗವತ್ ಹೇಳಿದ್ದಾರೆ.

Join Whatsapp