Home ಟಾಪ್ ಸುದ್ದಿಗಳು ಗುಜರಾತ್ ಟೈಟಾನ್ಸ್ ಗೆ ಬಿಗ್ ಶಾಕ್: IPL ಟೂರ್ನಿಯಿಂದ ಮೊಹಮ್ಮದ್ ಶಮಿ ಹೊರಕ್ಕೆ

ಗುಜರಾತ್ ಟೈಟಾನ್ಸ್ ಗೆ ಬಿಗ್ ಶಾಕ್: IPL ಟೂರ್ನಿಯಿಂದ ಮೊಹಮ್ಮದ್ ಶಮಿ ಹೊರಕ್ಕೆ

ನವದೆಹಲಿ: ಹಿಮ್ಮಡಿ ಗಾಯಕ್ಕೆ ಒಳಗಾಗಿರುವ ಭಾರತ ಕ್ರಿಕೆಟ್ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಗುಜರಾತ್ ಟೈಟಾನ್ಸ್‌ ಬಿಗ್​ ಶಾಕ್​ ಎದುರಾಗಿದ್ದು, ಸಂಪೂರ್ಣ ಐಪಿಎಲ್​ ಟೂರ್ನಿಯಿಂದಲೇ ಮೊಹಮ್ಮದ್ ಶಮಿ ಹೊರಗುಳಿಯಲಿದ್ದಾರೆ ಎಂದು PTI ವರದಿ ಮಾಡಿದೆ.


ವೇಗದ ಬೌಲರ್ ಮೊಹಮ್ಮದ್ ಶಮಿ 2023ರ ವಿಶ್ವಕಪ್ ಫೈನಲ್ ನ ನಂತರ ಭಾರತಕ್ಕಾಗಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಮೊದಲು ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ನಂಬಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯೂ ತಂಡದಲ್ಲಿ ಶಮಿ ಹೆಸರು ಕಾಣಿಸದೇ ಇದ್ದಾಗ ಗಾಯ ಖಚಿತವಾಯಿತು. ಮೊಹಮ್ಮದ್ ಶಮಿ ಅವರ ಎಡ ಹಿಮ್ಮಡಿಗೆ ಗಾಯವಾಗಿದೆ. ಶಸ್ತ್ರಚಿಕಿತ್ಸೆಗಾಗಿ ಅವರು ಶೀಘ್ರದಲ್ಲೇ ಬ್ರಿಟನ್ ಗೆ ತೆರಳಲಿದ್ದಾರೆ. ಐಪಿಎಲ್ ನಲ್ಲಿ ಆಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version